ಕುಷ್ಟಗಿ ಬೀಬಿ ಫಾತೀಮಾ ಶಾದಿಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ದ್ವೀತಿಯ ವರ್ಷದ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮವನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಉದ್ಘಾಟಿಸಿದರು. ಜಾನಪದ ವಿದ್ವಾಂಸ ಡಾ.ಇಮಾಮಸಾಬ್ ಹಡಗಲಿ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್, ಮಾಜಿ ಶಾಸಕ ಕೆ.ಶರಣಪ್ಪ ಇತರರಿದ್ದರು. 
ಕೊಪ್ಪಳ

ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲಿ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಆಶಯ
  • ಕುಷ್ಟಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕುಷ್ಟಗಿ: ಮುಸ್ಲಿಂ ಸಮುದಾಯದ ಮಕ್ಕಳು ಶಿಕ್ಷಣವಂತರಾಗಬೇಕಿದೆ. ಹೆಣ್ಣುಮಕ್ಕಳಿಗೆ ವಿಫುಲ ಅವಕಾಶಗಳಿದ್ದು, ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಕರೀಮ್ ಕಾಲನಿಯ ಬೀಬಿ ಫಾತೀಮಾ ಶಾದಿಮಹಲ್‌ನಲ್ಲಿ ತಾಲೂಕು ಅಂಜುಮನ್ ಇಸ್ಲಾಂ ಪಂಚ ಕಮಿಟಿ, ಅಂಜುಮನ್-ಏ-ಇಸ್ಲಾಂ ಪಂಚ ಕಮಿಟಿ ನಗರ ಘಟಕ ಮತ್ತು ಖಬರಸ್ತಾನ್ ಕಮಿಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಸ್ಲಿಂ ಸಮಾಜದಲ್ಲಿ ಶಿಕ್ಷಣದಿಂದ ಮಕ್ಕಳು ಹೆಚ್ಚು ಉನ್ನತ ಸಾಧನೆ ಮಾಡುವ ಮೂಲಕ ಹೊರ ಹೊಮ್ಮಬೇಕಿದೆ ಎಂದರು.
ಜಾನಪದ ವಿದ್ವಾಂಸ ಡಾ.ಇಮಾಮಸಾಬ್ ಹಡಗಲಿ ಉಪನ್ಯಾಸ ನೀಡಿ, ಮುಸ್ಲಿಂ ಸಮಾಜದ ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದ್ದು, ಸಮಾಜದ ತಾಯಂದಿರು ಮಕ್ಕಳ ಬಗ್ಗೆ ಕಾಳಜಿವಹಿಸಿ ಉನ್ನತ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ವಿದ್ಯೆಯನ್ನು ಕಲಿಸಿ ಒಳ್ಳೆಯ ಉದ್ಯೋಗಸ್ಥರನ್ನಾಗಿ ಮಾಡಬೇಕಾಗಿದೆ ಎಂದರು.
ಮೌಲಾನಾ ಫಜಲೇ ಅಜೀಮ್ ಮದರಸಾ ದಾರೂಲ್ ಊಲುಮ್ ಆಶ್ರಫಿಯಾ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರಾಗೃಹ ಸುಧಾರಣೆ ಸೇವೆ ಮುಖ್ಯ ಅಧೀಕ್ಷಕ ಡಾ. ಐ.ಜಿ ಮ್ಯಾಗೇರಿ ಮಾತನಾಡಿದರು. ಮಾಜಿ ಶಾಸಕ ಕೆ.ಶರಣಪ್ಪ, ಪಂಚ ಕಮಿಟಿ ಅಧ್ಯಕ್ಷ ಅಹ್ಮದ್ ಆದೋನಿ, ಉಪಾಧ್ಯಕ್ಷ ಮೈನುದ್ದೀನ್ ಮುಲ್ಲಾ, ಬಿಇಒ ಉಮಾದೇವಿ ಬಸಾಪೂರ, ಪ್ರಮುಖರಾದ ಎಚ್.ಆರ್.ಶೇಖ್, ಡಾ.ಜೀವನಸಾಬ ಬಿನ್ನಾಳ್, ಖಾಜಾಸಾಬ್ ಅತ್ತಾರ, ಡಾ.ಶೇಖ್ ಜವ್ಹಾದ್, ಹುಸೇನ್, ಎಚ್.ಎಸ್.ಉಸ್ತಾದ್, ಮೌಲಾನ ಅಹ್ಮದ್ ಹುಸೇನ್, ಮೌಲಾನಾ ಜಾಫರ್ ಸಾಧಿಕ್, ಮೆಹೆಬೂಬ್ ಖುಸುಬೂ, ಡಾ.ಬಾಬು, ಪುರಸಭೆ ಮಾಜಿ ಸದಸ್ಯ ಮೈಬುಸಾಬ್ ಕಮ್ಮಾರ, ರಾಜೇಸಾಬ್ ಗುಮಗೇರಾ ಇನ್ನಿತರರಿದ್ದರು.