ಗಂಗಾವತಿ ಜಯನಗರದ ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನೂಲು ಹುಣ್ಣಿಮೆಯ ಪದ್ಮಶಾಲಿ ಸಮಾಜದಿಂದ ಸಾಮೂಹಿಕ ಯಜ್ಞೋಪವೀತ ಧಾರಣೆ ನಿಮಿತ್ತ ವಿಶೇಷ ಪೂಜೆ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಜಿಲ್ಲಾಧ್ಯಕ್ಷ ಕೊಂಕತಿ ಕಾಳಪ್ಪ, ಪ್ರಮುಖರಾದ ಷಣ್ಮುಖಪ್ಪ ಚೀಲವೇರಿ, ಕೃಷ್ಣ ಚೀಲವೇರಿ, ಕೊಂಕತಿ ಪರಶುರಾಮ ಇತರರಿದ್ದರು. 
ಕೊಪ್ಪಳ

ಸಾಮೂಹಿಕ ಯಜ್ಞೋಪವೀತ ಧಾರಣೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯ
  • ಗಂಗಾವತಿ ದೇವಾಲಯದಲ್ಲಿ ವಿಶೇಷ ಪೂಜೆ
ಗಂಗಾವತಿ: ಜಯನಗರದ ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನೂಲು ಹುಣ್ಣಿಮೆ ನಿಮಿತ್ತ ಪದ್ಮಶಾಲಿ ಸಮಾಜದಿಂದ ಸಾಮೂಹಿಕ ಯಜ್ಞೋಪವೀತ ಧಾರಣೆ ನಡೆಯಿತು. ದೇವಾಲಯದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಪೂರ್ಣಕುಂಭ ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು.
ಸಮಾಜದ ಜಿಲ್ಲಾಧ್ಯಕ್ಷ ಕೊಂಕತಿ ಕಾಳಪ್ಪ ಮಾತನಾಡಿ, ಪದ್ಮಶಾಲಿ ಮತ್ತು ಉಪ ಪಂಗಡಗಳಿಗೆ ನೂಲುವಿಕೆ ಕುಲಕಸುಬಾಗಿದ್ದು, ಯಜ್ಞೋಪವೀತಧಾರಣೆ ಕಾರ್ಯಕ್ರಮವನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು ಎಂದರು. ದೇವಾಲಯದ ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಮಾಜದ ಪ್ರಮುಖರಾದ ಷಣ್ಮುಖಪ್ಪ ಚೀಲವೇರಿ, ಕೃಷ್ಣ ಚೀಲವೇರಿ, ಕೊಂಕತಿ ಪರಶುರಾಮ, ಅಶೋಕ ಚಲಕ, ಸುರೇಶ ಅವ್ವಾರ, ಸಂಜೀವ್ ಕುಮಾರ್ ಭಂಡಾರಿ, ವಿಠಲ್, ಮಾರ್ಕಂಡೇಯ ನೀಲಿ, ವೀರೇಶ ಭೀಮಪಲ್ಲಿ, ನಿಸರ್ಗ ಚಂದ್ರು ಇತರರಿದ್ದರು.
ಯಾಜ್ಞವಲ್ಕ್ಯ ದೇವಾಲಯ: ನೂಲು ಹುಣ್ಣಿಮೆ ನಿಮಿತ್ತ ನಗರದ ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ದೇವಾಲಯದಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ ಹಮ್ಮಿಕೊಳ್ಳಲಾಗಿತ್ತು. ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು. ನೂಲುಹುಣ್ಣಿಮೆ ವಿಶಿಷ್ಟತೆ ಮತ್ತು ಉಪನಯನದ ಮಹತ್ವದ ಕುರಿತು ಅರ್ಚಕ ಪ್ರದೀಪಾಚಾರ್ ಉಪನ್ಯಾಸ ನೀಡಿದರು. ದೇವಾಲಯ ಸಮಿತಿ ಪದಾಧಿಕಾರಿಗಳಾದ ಮುರಳೀಧರ ಕುಲ್ಕರ್ಣಿ, ಶೇಷಗಿರಿ ಕುಲ್ಕರ್ಣಿ, ಆನಂದ, ಪ್ರಸಾದ, ಪ್ರಸನ್ನ, ರಾಮಕೃಷ್ಣ, ಪ್ರಹ್ಲಾದ ಕೊಮಲಾಪುರ, ಗುರುರಾಜ್ ಚಿರ್ಚನಗುಡ್ಡ ಇತರರಿದ್ದರು.