ಗಂಗಾವತಿ ತಾಲೂಕಿನ ದಾಸನಾಳದ ಶ್ರೀ ಕಾಟಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ 17ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೋಮವಾರ ಉದ್ಘಾಟಿಸಿದರು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಆರ್ಯ ಈಡಿಗ ಸಮಾಜದ ಪೀಠಾಧಿಪತಿ ರೇಣುಕಾನಂದ ಸ್ವಾಮೀಜಿ ಇತರರಿದ್ದರು.
ಗಂಗಾವತಿ: ಸಾಮೂಹಿಕ ಮದುವೆಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಜನರ ಪ್ರೋತ್ಸಾಹ ಮುಖ್ಯವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ತಾಲೂಕಿನ ದಾಸನಾಳದ ಶ್ರೀ ಕಾಟಮೇಶ್ವರ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಂಡ 17ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ ಸಾಧ್ಯವಾಗಿದ್ದು, ಸಮುದಾಯದಲ್ಲಿನ ಒಗ್ಗಟ್ಟು ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದರು.
ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಆರ್ಯ ಈಡಿಗ ಸಮುದಾಯದ ಹಕ್ಕೋತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲಾಗಿದ್ದು, ಸಂಘಟನಾತ್ಮಕ ಹೋರಾಟದ ಮೂಲಕ ಪಡೆಯಲಾಗುವುದು ಎಂದರು.
ಎರಡು ಜೋಡಿ ದಾಂಪತ್ಯ ಜೀವನಕ್ಕೆ ಪಾದರ್ಪಣೆ ಮಾಡಿದವು. ಆರ್ಯಈಡಿಗ ಸಮಾಜದ ಪೀಠಾಧಿಪತಿ ರೇಣುಕಾನಂದ ಸ್ವಾಮೀಜಿ, ದಾಸನಾಳದ ಬಸವಣ್ಣೆಪ್ಪ ಸ್ವಾಮಿ, ವೀರೇಶ ಶಾಸಿ, ಆರ್ಯಈಡಿಗ ಸಮಾಜದ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ, ಪ್ರಮುಖರಾದ ನಾಗಪ್ಪ ಯರಡೋಣಿ, ಶ್ರೀಹರಿ ಕಾರಟಗಿ, ಶರಣಪ್ಪ ಕಾರಟಗಿ , ಶ್ರೀಕಾಂತ್ ಸಾಲುಂಚಿಮರ, ಆರ್. ದೇವಾನಂದ್, ನಾಗರಾಜ್ ಗುತ್ತೇದಾರ್, ಸಂಗಮೇಶ್, ವೀರಭದ್ರ ಗೌಡ ಮಾಲಿಪಾಟೀಲ್, ದುರ್ಗಪ್ಪ ಪೂಜಾರ್, ಮಾರ್ಕಂಡಯ್ಯ ಕುಣಿಕೇರಿ ಇತರರಿದ್ದರು.