ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹುತಾತ್ಮ ದಿನ ಶುಕ್ರವಾರ ಆಚರಿಸಲಾಯಿತು, ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ, ಅತಿಥಿ ಉಪನ್ಯಾಸಕ ಬಸವರಾಜ ಕರುಗಲ್, ಸಹಾಯಕ ಪ್ರಾಧ್ಯಾಪಕರಾದ ಅಶ್ರ್ ಅಳ್ಳಳ್ಳಿ, ಸತೀಶ್ ಇಟಗಿ, ಮಾಲತಿ, ಪತ್ರಾಂಕಿತ ವ್ಯವಸ್ಥಾಪಕ ಸಿ.ರಾಘಮ್ಮ, ಅಧೀಕ್ಷಕ ಕೆ.ಶಾಮೀದ್ ಇತರರಿದ್ದರು.
ಗಂಗಾವತಿ: ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹುತಾತ್ಮ ದಿನ ಶುಕ್ರವಾರ ಆಚರಿಸಲಾಯಿತು.
ರಾಷ್ಟ್ರಪಿತ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ ಸೇರಿ ಅನೇಕರು ಹುತಾತ್ಮರಾಗಿದ್ದು ಅವರ ಸೇವೆ ಸ್ಮರಿಸಬೇಕು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳಾದಿಯಾಗಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಬಸವರಾಜ ಕರುಗಲ್ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಅಶ್ರ್ ಅಳ್ಳಳ್ಳಿ, ಸತೀಶ್ ಇಟಗಿ, ಮಾಲತಿ, ಪತ್ರಾಂಕಿತ ವ್ಯವಸ್ಥಾಪಕ ಸಿ.ರಾಘಮ್ಮ, ಅಧೀಕ್ಷಕ ಕೆ.ಶಾಮೀದ್, ಪ್ರಥಮ ದರ್ಜೆ ಸಹಾಯಕಿ ಪ್ರತಿಭಾ ಮುದಗಲ್, ಸಿಬ್ಬಂದಿ ವೀರೇಶ್, ದುರ್ಗೇಶ್, ಮಡಿವಾಳಪ್ಪ, ಮಲ್ಲಿಕಾರ್ಜುನ, ನಾಗರಾಜ, ಸುಶೀಲಮ್ಮ, ಶರಣಮ್ಮ, ವೆಂಕಟೇಶ ಇತರರಿದ್ದರು.
ತಹಸಿಲ್ ಕಚೇರಿ: ಇಲ್ಲಿ ಕಂದಾಯ ಇಲಾಖೆಯಿಂದ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಲಾಯಿತು. ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಸುನೀಲ್ ಕುಲ್ಕರ್ಣಿ, ಶ್ರೀಕಂಠೇಶ, ಬಸವರಾಜ, ಕವಿತಾ, ನಾಗರತ್ನಮ್ಮ ಇತರರಿದ್ದರು.