ಕೊಪ್ಪಳದಲ್ಲಿ ಆಯೋಜಿಸಿರುವ ಮಾವು ಮೇಳಕ್ಕೆ ವಿಪ ಸದಸ್ಯೆ ಹೇಮಲತಾ ನಾಯಕ ಮಂಗಳವಾರ ಚಾಲನೆ ನೀಡಿದರು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಇದ್ದರು.  
ಕೊಪ್ಪಳ

ಕೊಪಣಗಿರಿಯಲ್ಲಿ ಮಾವಿನ ಘಮಲು

ಪ್ರಮುಖ ಮುಖ್ಯಾಂಶಗಳು

  • 10ನೇ ವರ್ಷದ ಮೇಳಕ್ಕೆ ಚಾಲನೆ
  • ನಾನಾ ತಳಿಯ ಹಣ್ಣು-ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯ
ಕೊಪ್ಪಳ: ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ವಾವಿನ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯಿಂದ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ 10ನೇ ವರ್ಷದ ಮಾವು ಮೇಳಕ್ಕೆ ಮಂಗಳವಾರ ಚಾಲನೆ ದೊರೆಯಿತು.
100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದು, 30ಕ್ಕೂ ಅಧಿಕ ಸ್ಟಾಲ್‌ಗಳನ್ನು ನೀಡಲಾಗಿದೆ. 10ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ಅಂಗಡಿ ಸಹ ಇದೆ. ಕೇಸರ್, ದಶಹರಿ, ಆಪೂಸ್, ಬೇನಿಷಾ, ಮಲ್ಲಿಕಾ, ಸಿಂಧೂರಿ, ಇವಾಮ್ ಪಸಂದ್, ತೋತಾಪುರಿ, ರಸಪುರಿ, ಸ್ವರ್ಣರೇಖಾ ಸೇರಿ 200ಕ್ಕೂ ಅಧಿಕ ದೇಶಿ ಹಾಗೂ ವಿದೇಶಿ ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನ ಮತ್ತು ವಾರಾಟಕ್ಕೆ ಇಡಲಾಗಿದೆ. ವಾವಿನ ಉಪ್ಪಿನಕಾಯಿ, ಸೀಕರಣೆ, ಜ್ಯೂಸ್ ಸೇರಿ ಹಲವು ಮೌಲ್ಯವರ್ಧಿತ ಉತ್ಪನ್ನಗಳು ಸಾರ್ವಜನಿರನ್ನು ಆಕರ್ಷಿಸುತ್ತಿವೆ.
ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಡಿಸಿ ಡಾ.ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ತೋಟಗಾರಿಕೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ ಇತರರಿದ್ದರು.

ಮಿಯಾಜಾಕಿ ಆಕರ್ಷಣೆ

ವಿಶ್ವದ ದುಬಾರಿ ವಾವು ಎಂದು ಖ್ಯಾತಿ ಪಡೆದ ಜಪಾನ್ ಮೂಲದ ಮಿಯಾಜಾಕಿ ತಳಿಯ ವಾವು ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಅಂತಾರಾಷ್ಟ್ರೀಯ ವಾರುಕಟ್ಟೆಯಲ್ಲಿ ಕೆ.ಜಿ.ಗೆ ಲಕ್ಷಾಂತರ ರೂ. ಮೌಲ್ಯ ಹೊಂದಿರುವ ಮಿಯಾಜಾಕಿ, ಕೊಪ್ಪಳದ ರೈತರು ಬೆಳೆದಿದ್ದಾರೆ. ಪ್ರತಿ ಕೆಜಿಗೆ 2,500-3,000 ರೂ. ನಿಗದಿಪಡಿಸಲಾಗಿದೆ. ವಾವಿನ ಆಕೃತಿಯ ಆಕರ್ಷಕ ಸೆಲ್ಫಿ ಪಾಯಿಂಟ್ ಮಕ್ಕಳು ಹಾಗೂ ಸಾರ್ವಜನಿಕರನ್ನು ಸೆಳೆಯುತ್ತಿದೆ. ಕೊಪ್ಪಳದ ಕೇಸರ್ ವಾವಿನ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.