ಅಳವಂಡಿ ಸಮೀಪದ ಬಿಸರಹಳ್ಳಿ ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್ ಬುಡ್ಡನಗೌಡ, ನಿರ್ದೇಶಕ ಹನುಮಂತಪ್ಪ ಕುರಿ, ಮುಖ್ಯಶಿಕ್ಷಕ ವೀರಣ್ಣ ಹಮ್ಮಿಗಿ, ಶಿಕ್ಷಕರಾದ ಬಾಬು ರೆಡ್ಡಿ, ಮಂಜುನಾಥ ಅರ್ಕಸಾಲಿ ಇದ್ದರು. 
ಕೊಪ್ಪಳ

ಟಿಇಟಿ ಕಡ್ಡಾಯಗೊಳಿಸುವುದು ಅನ್ಯಾಯ

ಪ್ರಮುಖ ಮುಖ್ಯಾಂಶಗಳು

  • ಅನ್ಯಾಯ
  • ಶಿಕ್ಷಕರು

ಟಿಇಟಿ ಕಡ್ಡಾಯಗೊಳಿಸುವುದು ಅನ್ಯಾಯ

ಅಳವಂಡಿ: ಸಮೀಪದ ಬಿಸರಹಳ್ಳಿ ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ ಅಖಿಲ ಭಾರತ ಶಿಕ್ಷಕರ ಸಂಘಟನೆಯ ಜಂಟಿ ಕ್ರಿಯಾ ಸಮಿತಿ, ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶನದಂತೆ ಗುರುವಾರ ಪ್ರಾಥಮಿಕ ಶಾಲಾ ಶಿಕ್ಷಕರು ಬೋಧನೆಗೆ ತೊಂದರೆ ಆಗದಂತೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ರಮೇಶ್ ಬುಡ್ಡನಗೌಡ ಮಾತನಾಡಿ, ಸೇವೆಯಲ್ಲಿರುವ ಶಿಕ್ಷಕರಿಗೆ ಮತ್ತೆ ಟಿಇಟಿ ಕಡ್ಡಾಯಗೊಳಿಸುವುದು ಅನ್ಯಾಯ. ಇದು ಶಿಕ್ಷಕರ ಸೇವಾ ಭದ್ರತೆಗೆ ಧಕ್ಕೆ ತರುತ್ತದೆ. ಸರ್ಕಾರ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹನುಮಂತಪ್ಪ ಕುರಿ ಮಾತನಾಡಿ, ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವ ಆದೇಶವನ್ನು ರದ್ದುಪಡಿಸಬೇಕು. ಶಿಕ್ಷಕರು ನಿವೃತ್ತಿಯ ನಂತರ ಗೌರವಯುತ ಜೀವನ ನಡೆಸಲು ಒಪಿಎಸ್ ಅಗತ್ಯ. ಆದ್ದರಿಂದ ಮಾರಕ ಎನ್‌ಪಿಎಸ್ ವ್ಯವಸ್ಥೆ ರದ್ದು ಮಾಡಬೇಕು.
ರಾಜ್ಯಾದ್ಯಂತ ನಡೆದ ಕಪ್ಪು ಪಟ್ಟಿ ಪ್ರತಿಭಟನೆಗೆ ಶಿಕ್ಷಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸರ್ಕಾರ ಶಿಕ್ಷಕರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದರು. ಮುಖ್ಯಶಿಕ್ಷಕ ವೀರಣ್ಣ ಹಮ್ಮಿಗಿ, ಶಿಕ್ಷಕರಾದ ಬಾಬು ರೆಡ್ಡಿ, ಮಂಜುನಾಥ ಅರ್ಕಸಾಲಿ ಇತರರಿದ್ದರು.