ಗಂಗಾವತಿಯ ವಿರುಪಾಪುರದಲ್ಲಿ ನಗರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಪ್ರಮುಖರಾದ ಮೆಹ್ರೂಜ್‌ಅಲಿಖಾನ್, ಯಮನೂರ ಚೌಡ್ಕಿ ಇತರರಿದ್ದರು. 
ಕೊಪ್ಪಳ

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚನೆ
  • ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಗಂಗಾವತಿ: ನಿಗದಿತ ಅವಧಿಯೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ವಿರುಪಾಪುರದಲ್ಲಿ ನಗರ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಚ್ೀಮಿನಿಷ್ಟರ್ ಇನ್ಫಾಸ್ಟ್ರಕ್ಚರ್ ಡೆವಲ್‌ಮೆಂಟ್ ಪ್ರೋಗ್ರಾಂ (ಸಿಎಂಐಡಿಪಿ) ಯೋಜನೆಯಡಿ ಮಂಜೂರಾದ 12 ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಜುಲಾಯಿನಗರದಿಂದ ದುರ್ಗಮ್ಮನಹಳ್ಳ ಬೈಪಾಸ್ ರಸ್ತೆಕ್ಕೆ 2 ಕೋಟಿ ರೂ., ಬಸವೇಶ್ವರ ವೃತ್ತದಿಂದ ಸೇವಾಲಾಲ್ ವೃತ್ತವರೆಗಿನ ರಸ್ತೆಗೆ 5 ಕೋಟಿ ರೂ. ಮತ್ತು ಸೇವಲಾಲ್ ವೃತ್ತದಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆವರೆಗಿನ ರಸ್ತೆಗೆ 5 ಕೋಟಿ ರೂ. ಮೀಸಲಿಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟೆಂಡರ್ ಷರತ್ತಿನಂತೆ ಕಾಮಗಾರಿ ನಿರ್ವಹಿಸಬೇಕು.
ನಗರದ ಸಮಗ್ರ ಅಭಿವೃದ್ಧಿಗೆ ಹಲವು ಪ್ರಸ್ತಾವನೆಗಳಿದ್ದು, ಅನುದಾನ ಕ್ರೋಢೀಕರಣದ ಮೂಲಕ ಹಂತಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಬಸವೇಶ್ವರ ವೃತ್ತದಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆವರೆಗಿನ ರಸ್ತೆ ವಿಸ್ತರಣೆ ಯೋಜನೆಯಲ್ಲಿದ್ದು, ವಿಸ್ತರಣೆ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ. ಲೋಕೋಪಯೋಗಿ ಇಲಾಖೆ ನಿರ್ವಹಣೆಯಲ್ಲಿ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಪಿಡಬ್ಲುೃಡಿ ಎಇಇ ವಿಶ್ವನಾಥ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಚನ್ನಪ್ಪ ಮಳಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಪ್ರಮುಖರಾದ ಮೆಹ್ರೂಜ್‌ಅಲಿಖಾನ್, ಯಮನೂರ ಚೌಡ್ಕಿ, ಶಿವಪ್ಪ ಮಾದಿಗ, ಅಮರಜ್ಯೋತಿ ನರಸಪ್ಪ ಇತರರಿದ್ದರು.