1. ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡೆಂಘೆ ವಿರೋಧಿ ಮಾಸಾಚರಣೆ ನಡೆಯಿತು. ವೈದ್ಯಾಧಿಕಾರಿ ರಾಜೇಂದ್ರ ಪ್ರಸಾದ, ಆರೋಗ್ಯ ಮೇಲ್ವಿಚಾರಕಿ ಶಂಕ್ರಮ್ಮ, ಸುರಕ್ಷಾಧಿಕಾರಿಗಳಾದ ಅನ್ವರಸಾಬ, ಚನ್ನಮ್ಮ ಇದ್ದರು. 2. ಲಿಂಗದಹಳ್ಳಿ ಗ್ರಾಮದಲ್ಲಿ ಡೆಂಘೆ ವಿರೋಧಿ ದಿನ ಆಚರಿಸಲಾಯಿತು. ಹಿರಿಯ ಆರೋಗ್ಯಾಧಿಕಾರಿ ಶಂಕ್ರಮ್ಮ, ಸಿಬ್ಬಂದಿ ಅನ್ವರ ಸಾಬ, ಗಾಯತ್ರಿ, ಚನ್ನಮ್ಮ ಇದ್ದರು.
- ವೈದ್ಯಾಧಿಕಾರಿ ರಾಜೇಂದ್ರ ಪ್ರಸಾದ ಸಲಹೆ
- ತಾವರಗೇರಾ ಡೆಂಘೆ ವಿರೋಧಿ ಮಾಸಾಚರಣೆ
ತಾವರಗೇರಾ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯಿಂದ ಡೆಂಘೆ ಜ್ವರ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೈದ್ಯಾಧಿಕಾರಿ ರಾಜೇಂದ್ರ ಪ್ರಸಾದ ಮಾತನಾಡಿ, ಮಳೆಗಾಲದಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳಲ್ಲಿ ಸೊಳ್ಳೆಗಳಿಂದ ಹರಡುವ ಡೆಂಘೆ ಒಂದು ಮಾರಕ ಮತ್ತು ಭೀಕರ ಜ್ವರವಾಗಿದ್ದು, ಇದರ ನಿಯಂತ್ರಣಕ್ಕೆ ಮೊದಲು ಪ್ರತಿಯೊಬ್ಬರೂ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಮತ್ತು ನೀರು ತುಂಬುವ ಬ್ಯಾರಲ್, ಮಡಕೆ ಇತರ ವಸ್ತುಗಳನ್ನು ಆಗಾಗ ತೊಳೆದು ನೀರು ತುಂಬಬೇಕು ಎಂದು ಸಲಹೆ ನೀಡಿದರು.
ಆಪ್ತ ಸಮಾಲೋಚಕ ಅರುಣ್ ಕುಮಾರ್ ಹಿರೇಮಠ, ಹಿರಿಯ ಆರೋಗ್ಯ ಮೇಲ್ವಿಚಾರಕಿ ಶಂಕ್ರಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅನ್ವರ್ ಸಾಹೇಬ್, ಪ್ರಾಥಮಿಕ ಸುರಕ್ಷಾ ಅಧಿಕಾರಿ ಚನ್ನಮ್ಮ, ಆಶಾ-ಅಂಗನವಾಡಿ ಕಾರ್ಯಕರ್ತರು ಇದ್ದರು.
ಲಿಂಗದಹಳ್ಳಿ: ಇಲ್ಲಿಯೂ ಡೆಂಘೆ ಜ್ವರ ವಿರೋಧಿ ದಿನ ಆಚರಿಸಲಾಯಿತು. ಹಿರಿಯ ಆರೋಗ್ಯಾಧಿಕಾರಿ ಶಂಕ್ರಮ್ಮ ಮಾತನಾಡಿ, ಮನೆಮುಂದೆ ನಿಲ್ಲುವ ನೀರು, ಹೊರಗಡೆ ಇಟ್ಟಿರುವ ಗಡಿಗೆ, ಟೈರ್‌ನಲ್ಲಿ ನಿಲ್ಲುವ ನೀರಿನಿಂದ ಈಡೀಸ್ ಸೊಳ್ಳೆ ಹುಟ್ಟಿಕೊಳ್ಳುತ್ತವೆ. ಇವು ಕಚ್ಚುವುದರಿಂದ ಡೆಂೆ ಜ್ವರ ಬರುತ್ತದೆ. ಆದ್ದರಿಂದ ಮನೆ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕೆಂದರು. ಆರೋಗ್ಯ ಸಹಾಯಕ ಅನ್ವರ್ ಸಾಹೇಬ, ಇಲಾಖೆಯ ಸಿಬ್ಬಂದಿ ಅರುಣಕುಮಾರ, ಆಶಾ, ಗಾಯತ್ರಿ, ಚನ್ನಮ್ಮ ಇದ್ದರು.