ಮೈನಳ್ಳಿ ಗ್ರಾಮದ ಶ್ರೀ ಬುಡ್ಡಮ್ಮದೇವಿ ಮೂರ್ತಿ ಪುರಪ್ರವೇಶದ ಅಂಗವಾಗಿ ಕಳಸ, ಕುಂಭ ಮೆರವಣಿಗೆ ನಡೆಯಿತು.  
ಕೊಪ್ಪಳ

ಮೈನಳ್ಳಿ ಬುಡ್ಡಮ್ಮದೇವಿ ಮೂರ್ತಿ ಪುರಪ್ರವೇಶ ಅದ್ದೂರಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಕಳಸ
  • ಕುಂಭ
  • ಮೆರವಣಿಗೆ
ಅಳವಂಡಿ: ಮೈನಳ್ಳಿ ಗ್ರಾಮದ ಆರಾಧ್ಯ ದೇವತೆ ಶ್ರೀಬುಡ್ಡಮ್ಮದೇವಿ ಮೂರ್ತಿ ಪುರಪ್ರವೇಶ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ ವಿವಿಧ ಹೂ ಹಾಗೂ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಶ್ರೀ ಬುಡ್ಡಮ್ಮದೇವಿ ಮೂರ್ತಿಯನ್ನಿರಿಸಿ ಮಹಿಳೆಯರ ಕಳಸ, ಕುಂಭ ಮೆರವಣಿಗೆ ಹಾಗೂ ಡೊಳ್ಳಿನ ಮೇಳ, ನಂದಿಕೋಲು ಹಾಗೂ ಇತರ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಮೂರ್ತಿ ಪುರಪ್ರವೇಶದ ಅಂಗವಾಗಿ ಗ್ರಾಮವನ್ನು ಸ್ವಚ್ಛಗೊಳಿಸಿ ನೀರು ಸಿಂಪಡಿಸಲಾಗಿತ್ತು.
ದೇವಸ್ಥಾನ ಹಾಗೂ ಗ್ರಾಮವನ್ನು ಸಿಂಗರಿಸಲಾಗಿತ್ತು. ಪ್ರಮುಖರಾದ ವಿದ್ಯಾಧರಗೌಡ ಹಿರೇಗೌಡರ, ದೇವಣ್ಣ ಕತ್ತಿ, ಯಂಕನಗೌಡ ಪಾಟೀಲ, ಈರಣ್ಣ ಮೂಲಿಮನಿ, ಮರೀಶಾಂತವೀರ ಸ್ವಾಮಿ, ಮಹೇಂದ್ರ ಗೌಡ ಕುರಡಗಿ, ಮಾರುತಿಗೌಡ ಕುರಡಗಿ, ಪರಮೇಶ್ವರಪ್ಪ, ಬಸವರಾಜ ಹಲಗೇರಿ, ಸಿದ್ದಪ್ಪ ಡಂಬ್ರಳ್ಳಿ, ಸಂಗಪ್ಪ ಬಾಸಿಂಗದಾರ ಇತರರಿದ್ದರು.