ಕನಕಗಿರಿಯ ವೇಮನ ವೃತ್ತದಲ್ಲಿ ಮಹಾಯೋಗಿ ವೇಮನ ಜಯಂತಿ ಸೋಮವಾರ ಆಚರಿಸಲಾಯಿತು. ಪಪಂ ಅಧ್ಯಕ್ಷೆ ತನುಶ್ರೀ, ಸದಸ್ಯರಾದ ಶೇಷಪ್ಪ ಪೂಜಾರ, ಅಭಿಷೇಕ ಕಲುಬಾಗಿಲಮಠ, ಶಿರಸ್ತೇದಾರ್ ಅನಿತಾ ಇಂಡಿ, ಹೇಮ ವೇಮ ರೆಡ್ಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮರೆಡ್ಡಿ ಇತರರಿದ್ದರು  
ಕೊಪ್ಪಳ

ಮಾನವ ಬದುಕಿನ ಪರಿವರ್ತನೆಕಾರ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ
ಕನಕಗಿರಿ: ಬದುಕಿನ ಸರ್ವಸ್ವವನ್ನು ತ್ಯಾಗ ಮಾಡಿದ ವೇಮನರು ಮಹಾಯೋಗಿಯಾದರು ಎಂದು ಹೇಮ ವೇಮ ರೆಡ್ಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮರೆಡ್ಡಿ ಹೇಳಿದರು.
ಪಟ್ಟಣದ ತಾವರಗೇರಾ ರಸ್ತೆಯಲ್ಲಿನ ವೇಮನ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನವೆಂಬ ಸಂತೆಯೊಳಗಿದ್ದುಕೊಂಡೆ ವೇಮನರು ಸಂತರಾಗಿದ್ದರು. ಸಮಾಜದಲ್ಲಿದ್ದ ಮೇಲು ಕೀಳು, ಮೂಢನಂಬಿಕೆ ಹಾಗೂ ಮಾನವ ಬದುಕಿನ ಪರಿವರ್ತನೆ ಕುರಿತಾಗಿ ವಚನಗಳನ್ನು ಬರೆಯುವ ಮೂಲಕ ತ್ರಿಪದಿ ಕವಿಗಳಾದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳವರಂತೆ ತೆಲುಗಿನಲ್ಲಿ ಮಹಾಯೋಗಿ ವೇಮನರು ಎಂದರು.
ರೆಡ್ಡಿ ಸಮುದಾಯ ಬಹುತೇಕ ಕೃಷಿಯನ್ನೇ ನಂಬಿ ಜೀವಿಸುತ್ತಿದೆ. ನಮ್ಮವರು ಇತರ ಸಮಾಜದವರೊಂದಿಗೆ ಅನ್ಯೋನ್ಯದಿಂದ ಜೀವನ ಸಾಗಿಸುತ್ತಾರೆ. ಅಂತಹ ಸಮಾಜದಲ್ಲಿ ಜನಿಸಿದ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ಕೇವಲ ನಮ್ಮ ಸಮಾಜಕ್ಕೆ ಸೀಮಿತವಾಗಿಲ್ಲ. ಅದಕ್ಕಾಗಿ ಹೇಮರಡ್ಡಿ ಮಲ್ಲಮ್ಮ ಇಡೀ ರೈತ ವರ್ಗದ ಬಾಳು ಬಂಗಾರವಾಗಲಿ ಎಂದು ಬೇಡಿಕೊಂಡಿದ್ದಾಳೆ ಎಂದರು.
ಇದೇ ವೇಳೆ ಪಪಂ ನೂತನ ಅಧ್ಯಕ್ಷೆ ತನುಶ್ರೀ ರಾಮಚಂದ್ರ ಅವರನ್ನು ರಡ್ಡಿ ಸಮಾಜದಿಂದ ಸನ್ಮಾನಿಸಲಾಯಿತು. ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ಅಭಿಷೇಕ ಕಲುಬಾಗಿಲಮಠ, ಸುರೇಶ ಗುಗ್ಗಳಶೆಟ್ರ, ಶೇಷಪ್ಪ ಪೂಜಾರ, ನಂದಿನಿ ಓಣಿಮನಿ, ಶಿರಸ್ತೇದಾರ್ ಅನಿತಾ ಇಂಡಿ, ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಭೋವಿ, ಪ್ರಮುಖರಾದ ಮಂಜುನಾಥರೆಡ್ಡಿ ಮಾದಿನಾಳ, ನಾರಾಯಣರೆಡ್ಡಿ ಮಾದಿನಾಳ, ರಾಮರೆಡ್ಡಿ ಅಳ್ಳಳ್ಳಿ ಇತರರಿದ್ದರು.