ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ, ಸಹಾಯಕ ಪ್ರಾಧ್ಯಾಪಕ ಎಂ.ಶಂಕ್ರಪ್ಪ, ಸಿಬ್ಬಂದಿ ವಿನಾಯಕ, ಶಾಂತಿ, ಶರಣ ಇತರರಿದ್ದರು.
ಗಂಗಾವತಿ: ಆಡಂಬರದಿಂದ ದಿಗಂಬರದೆಡೆಗೆ ಪಯಣಿಸಿದ ತ್ಯಾಗಿ ಮಹಾವೀರರು ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಸುಂಕೇಶ್ವರ ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಧರ್ಮಸಹಿಷ್ಣುತೆ, ಆತ್ಮಶುದ್ಧಿ ಮತ್ತು ಸಾಮಾಜಿಕ ಸಮಾನತೆಯ ಪ್ರತೀಕರಾಗಿದ್ದು, ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸಿದಾಗಲೇ ನಿಜವಾದ ಸ್ವಾತಂತ್ರ್ಯ ಪಡೆಯಬಹುದು ಎಂಬ ಶ್ರೇಷ್ಠ ಸಂದೇಶ ನೀಡಿದವರು ಮಹಾವೀರ ಎಂದರು.
ಸಹಾಯಕ ಪ್ರಾಧ್ಯಾಪಕ ಎಂ.ಶಂಕ್ರಪ್ಪ ಮಾತನಾಡಿ, ಮನು ಕುಲಕ್ಕೆ ಶಾಂತಿ, ಅಹಿಂಸೆ ಮತ್ತು ಸತ್ಯದ ಮಾರ್ಗ ತೋರಿದ ಮಹಾನ್ ತತ್ವಜ್ಞಾನಿ ಎಂದರು. ಸಿಬ್ಬಂದಿ ವಿನಾಯಕ, ಶಾಂತಿ, ಶರಣ ಇತರರಿದ್ದರು.
ತಹಸಿಲ್ ಕಚೇರಿ: ಇಲ್ಲಿ ಕಂದಾಯ ಇಲಾಖೆ ಮತ್ತು ಜೈನ್ ಸಮಾಜದಿಂದ ಮಹಾವೀರ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿ ಮಾತನಾಡಿ, ಅಹಿಂಸೆ ಮಾರ್ಗ ತೋರಿಸಿದ ಮಹಾವೀರ ಶ್ರೇಷ್ಟ ದಾರ್ಶನಿಕ ಎಂದರು. ಉಪ ತಹಸೀಲ್ದಾರ್ ಪ್ರಕಾಶ ನಾಯ್ಕ, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ಜೈನ ಸಮಾಜದ ಮುಖಂಡರಾದ ಬಾಬುಲಾಲ್ ಬಾಂಠಿಯಾ, ದೀಪಕ್, ಸುಭಾಷ್ ಜೈನ್, ಮಹಾವೀರ ಇತರರಿದ್ದರು.