ಮರಳಿಯ ಹನುಮಂತ ದೇವರ ದೇವಾಲಯದಲ್ಲಿ ಮಧ್ವನವಮಿ ಉತ್ಸವ ಸಂದರ್ಭ ಪಿಸ್ಸೆಸ್ಸೆನ್ ಮಾಜಿ ನಿರ್ದೇಶಕ ರಮೇಶ್ ಕುಲ್ಕರ್ಣಿ, ಪ್ರಮುಖರಾದ ಶೇಷಗಿರಿ ಕುಲಕರ್ಣಿ, ಪವನ ಕುಲಕರ್ಣಿ, ಮನೋಹರ್ ಜಾಲಿಹಾಳ ಇತರರಿದ್ದರು. 
ಕೊಪ್ಪಳ

ಮಧ್ವನವಮಿ ನಿಮಿತ್ತ ಭಕ್ತಿಭಾವದ ಉತ್ಸವ ಸಂಭ್ರಮ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಪಲ್ಲಕ್ಕಿ ಪ್ರದಕ್ಷಿಣೆ ವೈಭವ ಧಾರ್ಮಿಕ ವಿಧಿವಿಧಾನಗಳ ಆಯೋಜನೆ
ಗಂಗಾವತಿ: ತಾಲೂಕಿನ ಮರಳಿಯ ಹನುಮಂತ ದೇವರ ದೇವಾಲಯದಲ್ಲಿ ಮಧ್ವನವಮಿ ಉತ್ಸವ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ವಿವಿಧ ಗ್ರಾಮಗಳ ವಿಪ್ರ ಸಮಾಜದವರು ಉತ್ಸವ ಆಯೋಜಿಸಿದ್ದು, ಹನುಮಂತ ದೇವರಿಗೆ ಮಧು, ಎಳನೀರು, ಪಂಚಾಮೃತಾಭಿಷೇಕ, ಹೂವು, ತುಳಸಿ ಅಲಂಕಾರ ಹಾಗೂ ವೀಳ್ಯೆದೆಲೆ ಚೆಟ್ಟಿ ಅರ್ಪಿಸಲಾಯಿತು. ಹನುಮಂತ ದೇವರು ಹಾಗೂ ಮಧ್ವಾಚಾರ್ಯರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಹರೇ ಶ್ರೀನಿವಾಸ ಮಹಿಳಾ ಭಜನಾ ಮಂಡಳಿಯ ಕೋಲಾಟದೊಂದಿಗೆ ಪ್ರದಕ್ಷಿಣೆ ಸೇವೆ ಸಲ್ಲಿಸಲಾಯಿತು. ಬಳಿಕ ತೀರ್ಥ ಪ್ರಸಾದ ವಿತರಣೆ ಜರುಗಿತು.
ಪಿಸ್ಸೆಸ್ಸೆನ್ ಮಾಜಿ ನಿರ್ದೇಶಕ ರಮೇಶ್ ಕುಲ್ಕರ್ಣಿ, ಪ್ರಮುಖರಾದ ಶೇಷಗಿರಿ ಕುಲಕರ್ಣಿ, ಪವನ ಕುಲಕರ್ಣಿ, ಮನೋಹರ್ ಜಾಲಿಹಾಳ, ಗಿರಿಜಾ ಕುಲಕರ್ಣಿ, ಅನುಪಮಾ ಕುಲಕರ್ಣಿ, ಪುಷ್ಪಾ, ಗಾಯತ್ರಿ ಕುಲಕರ್ಣಿ, ದಿವ್ಯಾ ಕುಲಕರ್ಣಿ, ಅರ್ಚನಾ ಮಹಿಪತಿ, ಪವಿತ್ರ ಗುರುರಾಜ್, ರಮಾಕಾತರಕಿ, ರಂಜನಾ ಅಳವಂಡಿ, ಸೀತಾ ಮನೋಹರ, ಕೃಷ್ಣಚಾರ್ ಜೋಶಿ ಸೇರಿ ಮರಳಿ, ಪ್ರಗತಿನಗರ, ಜಂಗಮರ ಕಲ್ಗುಡಿ ಭಕ್ತರು ಭಾಗವಹಿಸಿದ್ದರು.
ಸತ್ಯಾಂಜನೇಯ ದೇವಾಲಯ: ನಗರದ ಜಯನಗರದ ಬಳಿಯ ಸತ್ಯಾಂಜನೇಯ ದೇವಾಲಯದಲ್ಲಿ ಮಧ್ವನವಮಿ ಉತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಸುಪ್ರಭಾತ, ಮಧು ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಪಂಚಾಮೃತಾಭಿಷೇಕ, ಪಲ್ಲಕ್ಕಿ ಉತ್ಸವ, ಭಜನೆ, ಲಘುರಥೋತ್ಸವ, ಮಹಾನೈವೇದ್ಯ ಹಾಗೂ ತೀರ್ಥ ಪ್ರಸಾದ ವಿತರಣೆ ಜರುಗಿತು. ಜ್ಞಾನ ಮಂದಿರದ ಮುಖ್ಯಸ್ಥ ಬೇವಿನಾಳ್ ಪ್ರಲ್ಹಾದಾಚಾರ್ ಅವರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಪ್ರಮುಖರಾದ ಹನುಮೇಶಾಚಾರ್, ತಿರುಮಲರಾವ್, ಕೇಸಕ್ಕಿ ವೆಂಕಟೇಶ ಇತರರಿದ್ದರು.