ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಲೆ ಮಹದೇಶ್ವರ ಕಾವ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಾಪಕ ಡಾ.ಮಣಿಕಂಠ ಹಂಗಳ ಅವರನ್ನು ಗೌರವಿಸಲಾಯಿತು. ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಡಾ.ಮುಮ್ತಾಜ್ ಬೇಗಂ, ಪ್ರಾಧ್ಯಾಪಕರಾದ ಡಾ.ಬಸವರಾಜ ಗೌಡನಬಾವಿ, ಗುಂಡೂರು ಪವನ್‌ಕುಮಾರ್ ಇತರರಿದ್ದರು. 
ಕೊಪ್ಪಳ

ಜ್ಞಾನ-ವಿವೇಕದ ಪ್ರತಿನಿಧಿ ಮಾದೇಶ್ವರ

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ಡಾ.ಮಣಿಕಂಠ ಹಂಗಳ ಅನಿಸಿಕೆ
ಗಂಗಾವತಿ: ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಮಲೆ ಮಹದೇಶ್ವರ ಕಾವ್ಯ ಹೊಸ ಓದು ಕುರಿತು ವಿಶೇಷ ಉಪನ್ಯಾಸ ಶುಕ್ರವಾರ ನಡೆಯಿತು.
ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಮಣಿಕಂಠ ಹಂಗಳ, ಮಲೆ ಮಹದೇಶ್ವರ ಕಾವ್ಯ ಕುರಿತು ವಿಶೇಷ ಉಪನ್ಯಾಸ ನೀಡಿ, ಕಲ್ಯಾಣದ ಶರಣರ ಪ್ರಭಾವ ದಕ್ಷಿಣ ಕರ್ನಾಟಕದ ಮೇಲಾದದ್ದಕ್ಕೆ ಸಾಕ್ಷಿ ಮಾದಪ್ಪ, ಜುಂಜಪ್ಪ ಮತ್ತು ಮಂಟೇಸ್ವಾಮಿಯವರ ಬದುಕು. ಇವರದ್ದು ಜನ ಸಮುದಾಯದ ಕಥನ. ಮಾದಪ್ಪ ಹಾಗೂ ಮಂಟೇಸ್ವಾಮಿಯ ಕಾವ್ಯದಲ್ಲಿ, ತಳಸಮುದಾಯದ ಮಾದಯ್ಯ ಮಾದೇಶ್ವರನಾಗಿ ವೈದಿಕೀಕರಣಗೊಂಡದ್ದು ಕಂಡುಬರುತ್ತದೆ. ಜ್ಞಾನ, ವಿವೇಕದ ಪ್ರತಿನಿಧಿಯಾಗಿ ಮಾದೇಶ್ವರ ನಿಲ್ಲುತ್ತಾನೆ. ಸ್ತ್ರೀ ಸಮಾನತೆಗೆ ಪ್ರಯತ್ನಿಸುತ್ತಾನೆ ಎಂದರು.
ಶಾಂತರಾಜು, ಮಣಿಕಂಠ ಹಂಗಳ, ಮಾದೇಶ್ವರ ಕಾವ್ಯದ ಕೆಲವು ಭಾಗಗಳನ್ನು ಹಾಡಿ ರಂಜಿಸಿದರು. ಹಿರಿಯ ಪ್ರಾಧ್ಯಾಪಕ ಡಾ.ಚನ್ನಬಸಪ್ಪ ಚಿಲಕರಾಗಿ ಮಾತನಾಡಿದರು. ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಡಾ.ಮುಮ್ತಾಜ್ ಬೇಗಂ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾಧ್ಯಾಪಕರಾದ ಡಾ.ಬಸವರಾಜ ಗೌಡನಬಾವಿ, ಗುಂಡೂರು ಪವನ್‌ಕುಮಾರ್, ಸರಸ್ವತಿ, ನೀಲಮ್ಮ, ರವಿ ಹಾದಿಮನಿ, ಡಾ.ಕೇಶವಮೂರ್ತಿ, ಡಾ.ಪಾಗುಂಡಪ್ಪ, ಪ್ರಜ್ವಲ, ಶಾಂತರಾಜು ಇತರರಿದ್ದರು.