ಹನುಮಸಾಗರದ ಶ್ರೀ ತೆರದ ಬಸವೇಶ್ವರ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ 11 ಜೊಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 
ಕೊಪ್ಪಳ

ಸುಖ ಸಂಸಾರಕ್ಕೆ ಪ್ರೀತಿ-ತಾಳ್ಮೆ ಮುಖ್ಯ

ಹನುಮಸಾಗರ: ನವದಂಪತಿಗಳು ಪರಸ್ಪರ ಅರಿತು ಸುಖವಾಗಿ ಸಂಸಾರ ನಡೆಸಬೇಕು ಎಂದು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಹೇಳಿದರು. 

ಶ್ರೀ ತೆರದ ಬಸವೇಶ್ವರ ದೇವಸ್ಥಾನಲ್ಲಿ ಜಾತ್ರೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ 11 ಜೊಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. 
ಜೀವನದಲ್ಲಿ ತಪ್ಪುಗಳು ನಡೆಯುವುದು ಸಹಜವಾಗಿದ್ದು, ತಿದ್ದಿಕೊಂಡು ಮುನ್ನಡೆಯಬೇಕು. ದುಶ್ಚಟಗಳಿಂದ ಬಹಳಷ್ಟು ಕುಟುಂಬಗಳು ಬೀದಿಗೆ ಬಿದ್ದಿದ್ದು, ಹೊಸ ಜೀವನಕ್ಕೆ ಕಾಲಿಡುತ್ತಿರುವ ವರ ಇನ್ಮುಂದೆ ದುಶ್ಚಟಗಳನ್ನು ಬಿಡಬೇಕು. ಸುಖ ಸಂಸಾರಕ್ಕೆ ಇಬ್ಬರ ನಡುವಿನ ಪ್ರೀತಿ ಮತ್ತು ತಾಳ್ಮೆ ಮುಖ್ಯ. ಪರಸ್ಪರ ಗೌರವ ನೀಡುತ್ತ ಬಾಳಬೇಕು. ಮನೆಯ ಹಿರಿಯರನ್ನು ಗೌರವದಿಂದ ಕಾಣಬೇಕು. ಅವರ ಮಾರ್ಗದರ್ಶನದಲ್ಲಿ ಜೀವನ ನಡೆಸಿದರೆ ಸಂಸಾರದ ಬಂಡಿ ಸುಗಮವಾಗಿ ಸಾಗುತ್ತದೆ ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಪ್ರಮುಖರಾದ ಬಸವರಾಜ ಬಾಚಲಾಪುರ, ಬಸವರಾಜ ಹಳ್ಳೂರು, ಸೂಚಪ್ಪ ದೇವರಮನಿ, ರುದ್ರಗೌಡ ಗೌಡಪ್ಪನವರ, ಬಾಬುಮಿಯಾ ಮೋಟಗಿ, ಕರಿಸಿದ್ದಪ್ಪ ಕುಷ್ಟಗಿ, ಪ್ರಶಾಂತ ಗಡಾದ, ಮಂಜುನಾಥ ಹುಲ್ಲೂರು, ಬಸವರಾಜ ದ್ಯಾವಣ್ಣನವರ, ಮರೇಗೌಡ ಬೋದೂರು, ಶಿವಪುತ್ರಪ್ಪ ಕೋಳೂರು, ರಾಮಣ್ಣ ಬಂಡಿವಡ್ಡರ, ಮಹಾಂತಯ್ಯ ಕೋಮಾರಿ, ರಮೇಶ ಬಡಿಗೇರ, ವೀರೇಶ ಈಳಗೇರಾ ಇತರರಿದ್ದರು.