ಕೊಪ್ಪಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ಜಯಂತಿಯನ್ನು ಶಾಸಕ ರಾವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಮಾಜಿ ಸಂಸದ ಸಂಗಣ್ಣ ಕರಡಿ, ನಿವೃತ್ತ ಉಪ ಅಧೀಕ್ಷಕ ಗಿರೀಶ ಕಾಂಬ್ಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ ಇದ್ದರು.
- ರಾಘವೇಂದ್ರ ಹಿಟ್ನಾಳ ಅಭಿಪ್ರಾಯ
ಕೊಪ್ಪಳ : ಶ್ರೀ ಭಗವಾನ್ ಬುದ್ಧ 6ಮತ್ತು 7ನೇ ಶತಮಾನದಲ್ಲಿ ಮೌಢ್ಯಗಳ ಕತ್ತಲನ್ನ ಓಡಿಸಿ ಜಗತ್ತಿಗೆ ಬೆಳಕು ನೀಡಿದರು. ಅವರು ಏಷ್ಯಾದ ಜ್ಯೋತಿ ಎಂದು ಕರೆಯುತ್ತಾರೆಂದು ಶಾಸಕ ರಾವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಭಗವಾನ್ ಬುದ್ಧ ಜಯಂತಿಯಲ್ಲಿ ಮಾತನಾಡಿದರು.
ಬುದ್ಧ ರಾಜಮನೆತನದಲ್ಲಿ ಜನಿಸಿದರೂ ಸುಖ&ಬೋಗಗಳನ್ನು ಬಿಟ್ಟು ಸಮ ಸಮಾಜದ ನಿಮಾರ್ಣಕ್ಕಾಗಿ ನಿಂತ ಮಹಾಮಹೀಮ. ಜಗತ್ತಿನಲ್ಲೇ ಬುದ್ಧ, ಬಸವ, ಅಂಬೇಡ್ಕರ್ ಮೂರು ಕಣ್ಣುಗಳಿದ್ದಂತೆ. ಅವರು ಹಾಕಿದ ದಾರಿಯಲ್ಲಿ ನಾವು ನಡೆಯಬೇಕು. ಸ್ವಾತಂತ್ರ್ಯ ಸಿಕ್ಕು 77 ವರ್ಷಗಳಾದರೂ ಸಮಾಜದಲ್ಲಿ ಅಸಮಾನತೆ ತೊಲಗಿಲ್ಲ. ಹೋಗಲಾಡಿಸಿದಾಗ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಬುದ್ಧ&ಬಸವ&ಅಂಬೇಡ್ಕರ್ ಜಗತ್ತಿಗೆ ಬೆಳಕು ನೀಡಿದ ಮಹಾನ್ ನಾಯಕರು. ಯುದ್ಧ ಬೇಡ ಬುದ್ಧ ಬೇಕು ಎಂದು ಜಗತ್ತೇ ಹೇಳುತ್ತಿದೆ. ಸಾಮರಸ್ಯದ ಬದುಕು ಕಟ್ಟಿಕೊಳ್ಳಲಾಗದಂತಹ ಪರಿಸ್ಥಿತಿಲ್ಲಿಂದು ಜಗತ್ತು ಮುಂದುವರೆದಿದೆ. ಅಹಿಂಸೆ ಬೇಡ, ನಾವು ಬದುಕಬೇಕು ಮತ್ತು ಇತರರಿಗೂ ಬದುಕಲು ಬಿಡಬೇಕು ಎಂಬ ಮಹತ್ವದ ಸಂದೇಶವನ್ನು ಗೌತಮ ಬುದ್ಧ ಅಂದೇ ನೀಡಿದ್ದಾರೆಂದರು.
ಧಾರವಾಡದ ನಿವೃತ್ತ ಉಪ ಅಧೀಕ್ಷಕ ಗಿರೀಶ ಕಾಂಬ್ಳೆ ವಿಶೇಷ ಉಪನ್ಯಾಸ ನೀಡಿ, ಬುದ್ಧ ಕೇವಲ ಭಾರತದ ಬೆಳಕಲ್ಲ, ಜಗತ್ತಿನ ಬೆಳಕು; ಮಹಾಸಾಗರ ಇದ್ದಂತೆ. ನಮ್ಮ ಮುಂದಿನ ಏಳ್ಗೇಗೆ, ನಮ್ಮ ಮುಂದಿನ ಬಾಳಿಗೆ ಬುದ್ಧ ಬೇಕು. ಬುದ್ಧನನ್ನು ಅರ್ಥ ಮಾಡಿಕೊಂಡವರು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕುತ್ತಾರೆಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ. ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪ್ರಮುಖರಾದ ಕೃಷ್ಣ್ಣ ಇಟ್ಟಂಗಿ, ಮುತ್ತುರಾಜ ಕುಷ್ಟಗಿ, ಸಿದ್ರಾಮ ಹೊಸಮನಿ, ನಾಗರಾಜ ಬೆಲ್ಲದ, ರಘು ಬೆಲ್ಲದ, ಜಗದೀಶ ಚಲವಾದಿ, ಹನುಮಂತಪ್ಪ ಬಂಗಾಳಿಗಿಡದ, ಮಹಾವೀರ ಅಳ್ಳಳ್ಳಿ, ಗವಿಸಿದ್ದಪ್ಪ ಬೆಲ್ಲದ ಇತರರಿದ್ದರು.