Lokayukta trap  
ಕೊಪ್ಪಳ

ಆರ್​ಟಿಒ ಕಚೇರಿ ಎಸ್ಡಿಎ ಲೋಕಾ ಬಲೆಗೆ

ಪ್ರಮುಖ ಮುಖ್ಯಾಂಶಗಳು

  • ಪ್ರಾದೇಶಿಕ ಸಾರಿಗೆ ಕಚೇರಿ ಎಸ್​ಡಿಎ
ಕೊಪ್ಪಳ: ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಎಸ್​ಡಿಎ ಲಂಚ ಪಡೆವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಹುಲಗಿ, ಕುಷ್ಟಗಿ, ಕಾರಟಗಿಯಲ್ಲಿ ವಾಹನ ಶೋ ರೂಂ ಆರಂಭಕ್ಕೆ ಪರವಾನಗಿ ಕೋರಿ ನಯಿಮ್​ ಎಂಬುವವರು ಅರ್ಜಿ ಸಲ್ಲಿಸಿದ್ದರು. ಸಂಬಂಧಿಸಿದ ದಾಖಲಾತಿ ಒದಗಿಸಿದ್ದರು. 40 ದಿನದೊಳಗೆ ಅರ್ಜಿ ವಿಲೇವಾರಿ ಮಾಡಬೇಕು. ಮೂರು ತಿಂಗಳಾದರೂ ಪರವಾನಗಿ ನೀಡಿಲ್ಲ. ಹಲವು ದಾಖಲೆ ತರುವಂತೆ ಅಲೆದಾಡಿಸಿದ್ದಾರೆ. ಕೊನೆಗೆ 21 ಸಾವಿರ ರೂ. ಲಂಚ ನೀಡುವಂತೆ ಎಸ್​ಡಿಎ ರಂಜಿತ್​ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಯಿಮ್​ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಕಚೇರಿಯಲ್ಲಿ ವಿನಯ್​ ಎಂಬಾತನ ಮೂಲಕ ಲಂಚದ ಹಣ ಪಡೆವ ವೇಳೆ ಲೋಕಾಯುಕ್ತ ಡಿವೈಎಸ್ಪಿ ಲೋಕೇಶ, ಪಿಐ ಸುನಿಲ್​ ಕುಮಾರ್​ ನೇತೃತ್ವದ ತಂಡ ದಾಳಿ ನಡೆಸಿ ಹಣದ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.