ಬೂದುಗುಂಪಾ ಗ್ರಾಪಂ ವ್ಯಾಪ್ತಿಯ ನಾಗೇಶನಹಳ್ಳಿ ಮುಖ್ಯರಸ್ತೆಯಲ್ಲಿ ಚರಂಡಿ ನೀರು ನಿಂತಿರುವುದು. 
ಕೊಪ್ಪಳ

ಧೂಳಿನಲ್ಲೇ ಜೀವನ ನಿರ್ವಹಣೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಮೂಲಸೌಕರ್ಯ

ಧೂಳಿನಲ್ಲೇ ಜೀವನ ನಿರ್ವಹಣೆ

ಮುನಿರಾಬಾದ್: ಸಮೀಪದ ಬೂದುಗುಂಪ ಗ್ರಾಪಂ ವ್ಯಾಪ್ತಿಯ ನಾಗೇಶನಹಳ್ಳಿ, ಎಡಹಳ್ಳಿ, ಹಳೇ ಕುಮುಟ ಮತ್ತು ಚಂದ್ರಗಿರಿ ಗ್ರಾಮಸ್ಥರು ಮೂಲಸೌಕರ್ಯ ಇಲ್ಲದೆ ಪರದಾಡುವಂತಾಗಿದೆ.
ಗ್ರಾಮಗಳಲ್ಲಿ ನಿತ್ಯ ನೂರಾರು ಟಿಪ್ಪರ್‌ಗಳು ಓಡಾಡುತ್ತಿದ್ದು, ಕಳಪೆ ಕಾಮಗಾರಿಯಿಂದ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರ ಧೂಳು ಮನೆಯನ್ನೆಲ್ಲ ಆವರಿಸುತ್ತಿದ್ದು ಉಸಿರಾಡಲು ಕಷ್ಟವಾಗಿದೆ. ವೇಗವಾಗಿ ಓಡಾಡುವ ಲಾರಿಗಳಿಂದ ಅಪಘಾತ ಭೀತಿ ಹೆಚ್ಚಾಗಿದೆ.
ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದರಿಂದ ಮಾರ್ಗ ಹಾಳಾಗಿರುವ ಜತೆಗೆ ವಾಹನ ಸವಾರರು ತ್ಯಾಜ್ಯ ನೀರಿನಲ್ಲೇ ಸಂಚರಿಸಬೇಕಿದೆ. ಈ ನೀರು ಒಂದೆಡೆ ಮಡುಗಟ್ಟಿ ನಿಂತಿದ್ದರಿಂದ ದುರ್ವಾಸನೆ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಭೀತಿ ನಮ್ಮನ್ನು ಕಾಡುತ್ತಿದೆ ಎಂದು ಗ್ರಾಮಸ್ಥರು ಆಳಲು ತೋಡಿಕೊಂಡಿದ್ದಾರೆ.