ತಾವರಗೇರಾ ಸಮೀಪದ ಮೆಣೇಧಾಳ ಗ್ರಾಮದ ಜಮೀನಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ 2 ಜಾನುವಾರುಗಳು ಸತ್ತಿವೆ. ಎಎಸ್‌ಐ ಶಿವಪುತ್ರಪ್ಪ, ಡಾ.ಮಾಗಿ, ಪೊಲೀಸ್ ಸಿಬ್ಬಂದಿ ಎಂ.ಡಿ.ರಫಿ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ ಇದ್ದರು.
ಬೆಂಕಿ ಅವಘಡಕ್ಕೆ ಜಾನುವಾರುಗಳು ಬಲಿ
ತಾವರಗೇರಾ: ಅಕಸ್ಮಿಕ ಬೆಂಕಿ ಅವಘಡದಿಂದ 2 ಜಾನುವಾರು ಹಾಗೂ ತೋಟಕ್ಕೆ ಉಪಯೋಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಡ್ರಿಪ್ ಪೈಪ್‌ಗಳು ಸುಟ್ಟ ಘಟನೆ ಸಮೀಪದ ಮೆಣೇಧಾಳ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.
ರೈತ ಅಮರೇಶಪ್ಪ ಉಳ್ಳಾಗಡ್ಡಿ ಅವರಿಗೆ ಸೇರಿದ ಹೊಲದಲ್ಲಿ ದನದ ಕೊಟ್ಟಿಗೆಯಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ 1 ಎತ್ತು, 1 ಆಕಳು ಸಜೀವದಹವಾಗಿವೆ. ಒಟ್ಟು 2ಲಕ್ಷ 80 ಸಾವಿರ ರೂ. ಹಾನಿಯಾಗಿದೆ.
ಎಎಸ್‌ಐ ಶಿವಪುತ್ರಪ್ಪ, ಸಿಬ್ಬಂದಿ ಮಹಮ್ಮದ್ ರಫಿ, ಪಶು ವೈದ್ಯ ಮಾಗಿ, ಗ್ರಾಮಾಧಿಕಾರಿ ಮೈತ್ರಾ ಪಾಟೀಲ್, ಕಂದಾಯ ನಿರೀಕ್ಷಕ ಶರಣಪ್ಪ ದಾಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.