ಗಂಗಾವತಿ ನೀಲಕಂಠೇಶ್ವರ ವೃತ್ತದ ಬಳಿಯ ಬಾಲಕಿಯರ ಪಿಎಂಶ್ರೀ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ನಗರಸಭೆಯಿಂದ ಹಮ್ಮಿಕೊಂಡ ಘನ್ಯ ತ್ಯಾಜ್ಯ ವಿಲೇವಾರಿ ಅಭಿಯಾನದಲ್ಲಿ ಪರಿಸರ ಇಂಜಿನಿಯರ್ ಶರಣಪ್ಪ ಮಾತನಾಡಿದರು. ಯೋಗ ಬಳಗದ ಪದಾಧಿಕಾರಿಗಳಾದ ಶ್ಯಾಮಮೂರ್ತಿ ಐಲಿ, ವೀರೇಶ ಹಿರೇಮಠ, ಸಮುದಾಯ ಸಂಚಾಲಕಿ ಶರಣಮ್ಮ ಕಲ್ಮನಿ ಇತರರಿದ್ದರು.
- ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ ಜಾಗೃತಿ
- ಗಂಗಾವತಿ ಘನ್ಯ ತ್ಯಾಜ್ಯ ವಿಲೇವಾರಿ ಅಭಿಯಾನ
ಗಂಗಾವತಿ: ಪರಿಸರ ಸ್ವಚ್ಛತೆಗೆ ಪೂರಕವಾದ ಘನತ್ಯಾಜ್ಯ ವಿಂಗಡಣೆಯಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದ್ದು, ಒಣ ಮತ್ತು ಹಸಿ ಕಸ ಬೇರ್ಪಡಿಸಲು ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ ಹೇಳಿದರು.
ನೀಲಕಂಠೇಶ್ವರ ವೃತ್ತದ ಬಳಿಯ ಬಾಲಕಿಯರ ಪಿಎಂಶ್ರೀ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಸ್ನೇಹ ಬಳಗ ಯೋಗ ಸಂಸ್ಥೆ ನೆರವಿನೊಂದಿಗೆ ಹಮ್ಮಿಕೊಂಡಿದ್ದ ಘನ್ಯ ತ್ಯಾಜ್ಯ ವಿಲೇವಾರಿ ಅಭಿಯಾನದಲ್ಲಿ ಮಾತನಾಡಿದರು. ಸ್ವಚ್ಛ ಭಾರತ ಅಭಿಯಾನ 2.0 ಯೋಜನೆಯಡಿ ತ್ಯಾಜ್ಯ ವಿಂಗಡಣೆಗೆ ಆದ್ಯತೆ ನೀಡಲಾಗುತ್ತಿದ್ದು, ಹಸಿ, ಒಣ, ವಿಶೇಷ ಮತ್ತು ಇತರೆ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲೆಂದರಲ್ಲಿ ಕಸ ಹಾಕುವುದು ಅಪರಾಧವಾಗಿದ್ದು, ಈಗಾಗಲೇ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರಿಶೀಲಿಸಲಾಗುತ್ತಿದೆ.ಕಸ ಹಾಕುವವರು ಕಂಡು ಬಂದಲ್ಲಿ ದಂಡದ ಜತೆಗೆ ಪ್ರಕರಣ ದಾಖಲಿಸಲಾಗುವುದು ಎಂದರು.
ಕಸ ವಿಂಗಡಣೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ಯೋಗ ಬಳಗದ ಪದಾಧಿಕಾರಿಗಳಾದ ಶ್ಯಾಮಮೂರ್ತಿ ಐಲಿ, ಸಂಗಮೇಶ ಕೋಟಿ, ವೆಂಕೋಬಣ್ಣ, ಆನಂದ ಪಟ್ಟಣಶೆಟ್ಟಿ, ವೀರೇಶ ಹಿರೇಮಠ, ಉದ್ದಾನಪ್ಪ ಅರಳಿ,ಟಿ.ಆರ್.ರಾಯಭಾಗಿ, ವಿದ್ಯಾಧರ ಯಾವಗಲ್, ನೈರ್ಮಲ್ಯ ವಿಭಾಗದ ಮೇಲ್ವಿಚಾರಕರಾದ ಮಹ್ಮದ್ ರಫೀ, ಮೋಹಿನ್, ಸಮುದಾಯ ಸಂಚಾಲಕಿ ಶರಣಮ್ಮ ಕಲ್ಮನಿ ಇತರರಿದ್ದರು.
ಲಿಟಲ್ ಹಾರ್ಟ್ಸ್ ಶಾಲೆ: ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ನಗರಸಭೆಯಿಂದ ಜಾಗೃತಿ ಅಭಿಯಾನ ಜರುಗಿತು. ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ಬಳಕೆಯಿಂದಾಗುವ ಸಮಸ್ಯೆ ಮತ್ತು ಪರಿಸರದ ಮೇಲಿನ ಪರಿಣಾಮ ಕುರಿತು ಮಾಹಿತಿ ನೀಡಲಾಯಿತು. ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ, ಮುಖ್ಯಶಿಕ್ಷಕಿ ಎಂ.ಪ್ರಿಯಾಕುಮಾರಿ, ಸಮುದಾಯ ಸಂಚಾಲಕರಾದ ಶಾಂತಾ, ಶ್ರೀದೇವಿ, ಶರಣಮ್ಮ ಕಲ್ಮನಿ ಇತರರಿದ್ದರು.=