ಭಾಗ್ಯನಗರದಲ್ಲಿ ಆಯೋಜಿಸಿದ್ದ ಮುಂಗಾರು ಕವಿಗೋಷ್ಠಿಯಲ್ಲಿ ಕನ್ನಡ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟಗಿರಿ ದಳವಾಯಿ ಮಾತನಾಡಿದರು. ಹಿರಿಯ ಪರಿಸರವಾದಿ ಡಾ.ಸಂಜೀವ ಕುಲಕರ್ಣಿ, ಸಾಹಿತಿ ಡಿ.ಎಂ. ಬಡಿಗೇರ, ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಶಂಕರ ಹಲಗತ್ತಿ ಇತರರಿದ್ದರು.
- ಪ್ರಶ್ನೆ
- ಪ್ರತಿಯೊಬ್ಬರೂ
- ಆತ್ಮಾವಲೋಕನ
ಕವಿಗಳು ದೇಶದ ನದಿಗಳಿದ್ದಂತೆ. ನದಿಗಳು ಜೀವಜಲ ನೀಡುವಂತೆ ಕವಿಗಳು ಮತ್ತು ಅವರ ಸಾಹಿತ್ಯವೂ ಜನರ ಬದುಕಿಗೆ ಉಪಯುಕ್ತವಾಗಬೇಕು. ಜನಪರವಿಲ್ಲದ ಸಾಹಿತ್ಯ ಕೇವಲ ಪಠ್ಯವಾಗಿ ಉಳಿಯುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ
ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ಹೇಳಿದರು.
ಭಾಗ್ಯನಗರದಲ್ಲಿ ಶನಿವಾರ ಆಯೋಜಿಸಿದ್ದ ಮುಂಗಾರು ಕವಿಗೋಷ್ಠಿಯಲ್ಲಿ ವಾತನಾಡಿದರು. ಕವಿ ಮತ್ತು ಕವಿತೆ ಸವಾಜಕ್ಕೆ ಯಾವ ರೀತಿಯ ಕೊಡುಗೆ ನೀಡುತ್ತಿವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ವಾಡಿಕೊಳ್ಳಬೇಕು. ಸಾಹಿತಿಗಳು ಸರ್ಕಾರದ ಪ್ರಶಸ್ತಿಗಳಿಗಾಗಿ ಅಲ್ಲ, ಜನರ ಒಪ್ಪಿಗೆ ಮತ್ತು ಮೆಚ್ಚುಗೆಗಾಗಿ ಬರೆಯಬೇಕು. ಸಾಹಿತ್ಯವು ಸವಾಜದ ನೋವು, ಸಮಸ್ಯೆಗಳು ಹಾಗೂ ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ಬರಹಗಾರರು ಪ್ರಭುತ್ವವನ್ನು ಪ್ರಶ್ನಿಸುವ ಧೈರ್ಯ ಹೊಂದಿರುವುದರ ಜತೆಗೆ ನೈತಿಕತೆ ಕಾಪಾಡಿಕೊಳ್ಳಬೇಕು. ಜ್ಞಾನ ಮತ್ತು ಚಾರಿತ್ರ್ಯ ಎರಡೂ ಸಾಹಿತ್ಯದ ಶಕ್ತಿಯಾಗಬೇಕು. ಈ ದೃಷ್ಟಿಯಿಂದ ಡಾ.ಅಂಬೇಡ್ಕರ್ ಬದುಕು ಬರಹಗಾರರಿಗೆ ಆದರ್ಶವಾಗಿದೆ. ನೈತಿಕ ಮೌಲ್ಯ ಉಳಿಸಿಕೊಂಡಾಗ ಸಾಹಿತ್ಯಕ್ಕೆ ಜೀವ ಬರುತ್ತದೆ ಎಂದರು.
ಹಿರಿಯ ಪರಿಸರವಾದಿ ಹಾಗೂ ವೈದ್ಯ ಸಂಜೀವ ಕುಲಕರ್ಣಿ ವಾತನಾಡಿ, ಹಲವು ಕವಿತೆಗಳು ಸಮಕಾಲೀನ ಸವಾಜದ ವಾಸ್ತವವನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದ್ದು, ಕವಿಗಳ ಸಾವಾಜಿಕ ಜವಾಬ್ದಾರಿ ಎತ್ತಿಹಿಡಿದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಡಿ.ಎಂ.ಬಡಿಗೇರ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂವು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಸಂದಿಂದ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಕುರಿತು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ವಾತನಾಡಿದರು.
ಗೋಷ್ಠಿಯಲ್ಲಿ ಜಿಲ್ಲೆಯ 28 ಕವಿಗಳು ಕವಿತೆಗಳನ್ನು ವಾಚಿಸಿದರು. ಹಿರಿಯ ಸಾಹಿತಿ ಈಶ್ವರ ಹತ್ತಿ, ಕರ್ನಾಟಕ ವಿದ್ಯಾವರ್ಧಕ ಸಂದ ಜಿಲ್ಲಾ ಸದಸ್ಯ ಸಂಚಾಲಕ ರಮೇಶ ಗಬ್ಬೂರ, ಪ್ರಮುಖರಾದ ಪವನ್ ಕುವಾರ್ ಬಿಸರಹಳ್ಳಿ, ವಾಲಾ ಬಡಿಗೇರ ಇತರರಿದ್ದರು.