ಯಲಬುರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅನುಬಂಧ ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಡಾ.ಎಸ್.ವಿ.ಡಾಣಿ ಪ್ರತಿಜ್ಞಾವಿಧಿ ಬೋಧಿಸಿದರು. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಕೆ.ಎಚ್.ಛತ್ರದ, ಸಿಬ್ಬಂದಿ ಡಾ.ರವೀಂದ್ರ ಬೆಟಗೇರಿ, ಡಾ.ಡಿ.ಎಂ.ಪ್ರಹ್ಲಾದ, ಡಾ.ಕಾಳಮ್ಮ, ದೀಪಾ, ಕೋಮಲಾ, ರಾಜಿಮಾ ಬೇಗಂ, ರೇಖಾ, ಅಶ್ವಿನಿ, ಅಕ್ಷತಾ, ಶರಣಗೌಡ, ಶ್ರೀಕಾಂತ ಇತರರಿದ್ದರು. 
ಕೊಪ್ಪಳ

ಬದುಕಿನ ಮೌಲ್ಯ ತಿಳಿಸುವ ಶಾಸ್ತ್ರ ಸಾಹಿತ್ಯ

ಪ್ರಮುಖ ಮುಖ್ಯಾಂಶಗಳು

  • ಮಾನವೀಯತೆ
  • ಇಲ್ಲದ
  • ವಿಜ್ಞಾನ
ಯಲಬುರ್ಗಾ: ಸಾಹಿತ್ಯ ಬದುಕಿನ ಮೌಲ್ಯ ತಿಳಿಸುವ ಶಾಸ್ತ್ರವಾಗಿದೆ ಎಂದು ಕೊಪ್ಪಳ ವಿವಿ ಕುಲಸಚಿವ ಡಾ.ಎಸ್.ವಿ.ಡಾಣಿ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಯನ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ನಿಮಿತ್ತ ಹಮ್ಮಿಕೊಂಡಿದ್ದ ಅನುಬಂಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಬದುಕಿನ ಕೈಗನ್ನಡಿಯಾಗಿ ಕೆಲಸ ಮಾಡುತ್ತದೆ.
ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಸಾರಿದ್ದಾನೆ. ಜಗತ್ತಿನ ಜನರೆಲ್ಲ ಏಕಭಾವದಲ್ಲಿ ಬದುಕಬೇಕು ಎಂಬುದು ಆತನ ಉದ್ದೇವಾಗಿತ್ತು. ನಂತರ ಬಸವಾದಿ ಶರಣರು ಸೋಹಂ ಬದಲಾಗಿ ದಾಸೋಹಂ ಎನ್ನುತ ದುಡಿದು ಇತರರಿಗೂ ಹಂಚಿ ಬದುಕಬೇಕು ಎಂದು ಸಾರಿದ್ದಾರೆ.
ಏಳು ಪಾಪಗಳಲ್ಲಿ ಚಾರಿತ್ರ್ಯವಿಲ್ಲದ ಜ್ಞಾನ ಮತ್ತು ಮಾನವೀಯತೆ ಇಲ್ಲದ ವಿಜ್ಞಾನ ದೇಶದ ಬೆಳವಣಿಗೆಗೆ ಮಾರಕವಾಗಬಲ್ಲವು ಎಂದು ಗಾಂಧಿಜೀ ಹೇಳಿದ್ದಾರೆ.
ಇಂದು ವಿಜ್ಞಾನ ಉನ್ನತ ಪ್ರಗತಿ ಹೊಂದಿದೆ. ಎಐ ತಂತ್ರಜ್ಞಾನ ಬಂದನಂತರ ಜಗತ್ತು ಮನಬಂದಂತೆ ಸೃಜಿಸುತ್ತಿದೆ. ಸಾಮಾಜಿಕ ಮಾಧ್ಯಮವು ಜಗತ್ತಿನ ಕಸದಬುಟ್ಟಿಯಂತಾಗಿದೆ. ವಿಜ್ಞಾನಕ್ಕೆ ಸಾಹಿತ್ಯ, ಕರುಣೆ, ಕಾಳಜಿ ಜತೆಯಾದರೆ ಅನುಬಂಧ ಪರಿಕಲ್ಪನೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.