ಗಂಗಾವತಿ ಐಎಂಎ ಹಾಲ್‌ನಲ್ಲಿ ಲಯನ್ಸ್‌ಕ್ಲಬ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಜಿಲ್ಲಾ ಸಭಾಪಾಲಕ ಗವಿಸಿದ್ದಪ್ಪ ಮುದ್ಗಲ್ ಉದ್ಘಾಟಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್, ಪ್ರತಿನಿಧಿಗಳಾದ ಜ್ಯೋತಿ ಪಿ.ಕುಲ್ಕರ್ಣಿ, ಡಾ.ಎ.ಸೋಮರಾಜು ಇತರರಿದ್ದರು. 
ಕೊಪ್ಪಳ

ಲಯನ್ಸ್‌ಕ್ಲಬ್‌ನಿಂದ ಗ್ರಾಮೀಣಾಭಿವೃದ್ಧಿಗೂ ಒತ್ತು

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್‌ಕ್ಲಬ್
  • ತಾಲೂಕು
  • ಘಟಕ
ಗಂಗಾವತಿ: ಪರಿಸರ ರಕ್ಷಣೆ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕ್ರೀಯಾ ಶೀಲ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಸಭಾಪಾಲಕ ಗವಿಸಿದ್ದಪ್ಪ ಮುದ್ಗಲ್ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಲಯನ್ಸ್‌ಕ್ಲಬ್ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸುವರ್ಣ ಮಹೋತ್ಸವ ಆಚರಿಸಿಕೊಂಡ ಕ್ಲಬ್‌ನಿಂದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಗ್ರಾಮೀಣಾಭಿವೃದ್ಧಿಗೂ ಒತ್ತು ನೀಡಲಾಗಿದೆ ಎಂದರು.
ಕಳೆದ ವರ್ಷದ ಕಾರ್ಯಕ್ರಮಗಳ ಕುರಿತು ನಿಕಟಪೂರ್ವ ಅಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್ ಮಾಹಿತಿ ನೀಡಿದರು. ಪದಾಧಿಕಾರಿಗಳಾದ ಅಧ್ಯಕ್ಷ ಡಾ.ಜಿ.ದೇವರಾಜ್ ಚಂದ್ರಪ್ಪ ಕಾರ್ಯದರ್ಶಿ, ಹೊಸಳ್ಳಿ ಶಂಕರ ಪಾಟೀಲ್, ಖಜಾಂಚಿ ಎನ್.ಹರೀಶ್ ಅಧಿಕಾರ ಸ್ವೀಕರಿಸಿದರು.
ಹಿರಿಯ ಪ್ರತಿನಿಧಿಗಳಾದ ಡಾ.ಜಿ.ಚಂದ್ರಪ್ಪ, ಡಾ.ಎ.ಸೋಮರಾಜು, ಡಾ.ಮಾಧವ ಶೆಟ್ಟಿ, ಜಂಬಣ್ಣ ಐಲಿ, ಗಾಳಿ ಶಿವಪ್ಪ, ಜ್ಯೋತಿ ಪಿ.ಕುಲ್ಕರ್ಣಿ, ಪ್ರದೀಪ ಕುಲ್ಕರ್ಣಿ, ಡಾ.ವಿ.ವಿ. ಚಿನಿವಾಲರ್, ಟಿ. ರಾಮಕಷ್ಣ, ಮೋಹನ್ ಕೋಟಿ, ರವಿ ಚೇತನ್ ರೆಡ್ಡಿ,ಡಿ.ಎಂ.ಅಭಿಷೇಕ್ ಸರ್ವೇಶ್ ಮಾಂತಗೊಂಡ, ಎಸ್.ಎಸ್. ಪಟ್ಟಣಶೆಟ್ಟಿ, ಡಾ. ಮಲ್ಲನಗೌಡ, ಡಾ.ಎ.ಎಸ್.ಎನ್. ರಾಜು, ಶ್ರೀಕಾಂತ್ ಮಾಕಿನೇನಿ, ಡಾ. ಕೆ.ಎನ್.ಮಧುಸೂಧನ್ ಇತರರಿದ್ದರು.