ಭಾರಿ ಮಳೆಗೆ ಸಿದ್ದಾಪುರ ಹೊರವಲಯದ ಹಳ್ಳ ತುಂಬಿರುವುದು. 
ಕೊಪ್ಪಳ

ಹಳ್ಳ-ಕೊಳ್ಳಗಳಿಗೆ ಜೀವಕಳೆ

ಪ್ರಮುಖ ಮುಖ್ಯಾಂಶಗಳು

  • ಸಿಡಿಲು, ಗುಡುಗು ಸಹಿತ ಭಾರಿ ಮಳೆ
  • ರಸ್ತೆಗಳು ಸಂಪೂರ್ಣ ಜಲಾವೃತ
ಸಿದ್ದಾಪುರ: ಗ್ರಾಮ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಸಿಡಿಲು ಹಾಗೂ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಕೊಟ್ನೇಕಲ್, ಬರಗೂರು, ಜಮಾಪುರ, ಮುಸ್ಟೂರು, ಗುಂಡೂರು, ಲಕ್ಷ್ಮೀಕ್ಯಾಂಪ್, ನಂದಿಹಳ್ಳಿ, ಕಕ್ಕರಗೋಳ ಮತ್ತಿತರೆಡೆ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು.
ಮಳೆಯಿಲ್ಲದೆ ಬರಿದಾಗಿದ್ದ ಹಳ್ಳ-ಕೊಳ್ಳಗಳಿಗೆ ಜೀವಕಳೆ ಬಂದಿದೆ. ಕೃಷಿ ಚಟುವಟಿಕೆ ಆರಂಭಿಸಲು ರೈತರಿಗೆ ರೋಹಿಣಿ ಮಳೆ ಆಶಾಭಾವ ಮೂಡಿಸಿದೆ. ಜಲಾಶಯದಲ್ಲಿ ನೀರಿಲ್ಲದ ಕಾರಣ ಉದ್ದು, ಹೆಸರು, ಸಾಸಿವೆ ಇತರ ಬೆಳೆ ಬೆಳೆದಿರುವ ರೈತರಿಗೆ ಮಳೆ ವರವಾಗಿದೆ.