ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ಸಿಪಿಎಂ ಪಕ್ಷದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಪರಶುರಾಮ, ಮಲ್ಲಪ್ಪ ಮ್ಯಾಗಡೆ, ನಿಂಗಪ್ಪ, ಶಿವು, ಮೌಲಾಹುಸೇನ್, ಪಾಮಣ್ಣ ಕಜ್ಜಿ, ಹುಸೇನ್ ಸಾಬ್ ತಾವರಗೇರಾ ಇತರರಿದ್ದರು.
- ಪುಂಡಾಟಿಕೆ
- ಕ್ರಮವಾಗಲಿ
- ಪ್ರತಿಭಟನೆ
ಅಮೆರಿಕಾ ಪುಂಡಾಟಿಕೆ ವಿರುದ್ಧ ಕ್ರಮವಾಗಲಿ
ಕನಕಗಿರಿ: ವೆನಿಜುವೆಲಾ ಮೇಲಿನ ಅಮೆರಿಕಾ ಮಿಲಿಟರಿ ದಾಳಿ ಖಂಡಿಸಿ ಸಿಪಿಎಂ ಪಕ್ಷದಿಂದ ಮಂಗಳವಾರ ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಮಾತನಾಡಿ, ವೆನೆಜುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿದ್ದರಿಂದ ಮಡುರೋರನ್ನು ಪದಚ್ಯುತಿಗೊಳಿಸಲು ಅಮೆರಿಕಾ ಮಿಲಿಟರಿ ಕಾರ್ಯಾಚರಣೆ ನಡೆಸಿದೆ.
ಒಂದು ಸಾರ್ವಭೌಮ, ಸ್ವಾತಂತ್ರೃ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರದ ಅಧ್ಯಕ್ಷರನ್ನು ಮತ್ತೊಂದು ದೇಶ ಮಿಲಿಟರಿ ಆಕ್ರಮಣದ ಮೂಲಕ ಅಪಹರಿಸಿರುವುದು ದೌರ್ಜನ್ಯ. ವೆನೆಜುವೆಲಾ ದೇಶದ ಮೇಲೆ ನಡೆದಿರುವ ದಾಳಿ ಪ್ರಪಂಚದ ಎಲ್ಲ ಸಾರ್ವಭೌಮ ದೇಶಗಳ ಮೇಲಿನ ಆಕ್ರಮಣವಾಗಿದೆ.
ಕೂಡಲೇ ವೆನೆಜುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಅಮೆರಿಕಾವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೆರಿಕಾದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಪರಶುರಾಮ, ಮಲ್ಲಪ್ಪ ಮ್ಯಾಗಡೆ, ನಿಂಗಪ್ಪ, ಶಿವು, ಮೌಲಾಹುಸೇನ್, ಪಾಮಣ್ಣ ಕಜ್ಜಿ, ಹುಸೇನ್ ಸಾಬ್ ತಾವರಗೇರಾ, ಹುಸೇನಪ್ಪ ಕಜ್ಜಿ, ಅಲ್ಲಾ ಸಾಬ್ ಕೋರಿ, ಹೊನ್ನಪ್ಪ ಮಡಿವಾಳ, ರಾಮಣ್ಣ ಛಲವಾದಿ, ವೀರೇಶ, ಹೊನ್ನೂರು ಸಾಬ್, ಸಣ್ಣ ನಿಂಗಪ್ಪ ಮ್ಯಾಗೆಡೆ, ವೆಂಕಟೇಶ್ ಬಾವಿಕಟ್ಟಿ, ಹನುಮಂತ ಇತರರಿದ್ದರು.