ಕುಕನೂರು ತಹಸಿಲ್ ಕಚೇರಿಯಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಮುರಳೀಧರಾವ್ ಕುಲಕರ್ಣಿ, ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಸಮಾಜದ ಮುಖಂಡರಾದ ಹಂಪಣ್ಣ ಕಟ್ಟಿಮನಿ, ಮೇಘರಾಜ ಬಳಿಗೇರಿ, ಬಸವಂತಪ್ಪ ನಾಯಕ, ವಿಶ್ವನಾಥ ಬಳಿಗೇರಿ ಇತರರಿದ್ದರು. 
ಕೊಪ್ಪಳ

ಸಮಸಮಾಜದ ಪರಿಕಲ್ಪನೆ ಸಾಕಾರಗೊಳಿಸೋಣ

ಪ್ರಮುಖ ಮುಖ್ಯಾಂಶಗಳು

  • ಗೋರ್ ಸೇನಾ ಪ್ರ.ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿಕೆ
  • ಕುಕನೂರು ಸಂತ ಶ್ರೀ ಸೇವಾಲಾಲ್ ಜಯಂತಿ
ಕುಕನೂರು: ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವ-ಸಿದ್ಧಾಂತ, ಆಚಾರ-ವಿಚಾರಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಪ್ರಗತಿ ಹೊಂದಬೇಕು ಎಂದು ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಂಡ ಭಾರತ ದೇಶದ ಪ್ರತಿಯೊಬ್ಬ ಸಂತ-ಮಹಾಂತರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟು, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಅವರು ಕಂಡ ಸಮಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು. ಅಂದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಗ್ರೇಡ್-2 ತಹಸೀಲ್ದಾರ್ ಮುರಳೀಧರಾವ್ ಕುಲಕರ್ಣಿ ಮಾತನಾಡಿದರು. ಸಮಾಜದ ಮುಖಂಡರಾದ ಹಂಪಣ್ಣ ಕಟ್ಟಿಮನಿ, ಮೇಘರಾಜ ಬಳಿಗೇರಿ, ಬಸವಂತಪ್ಪ ನಾಯಕ, ವಿಶ್ವನಾಥ ಬಳಿಗೇರಿ, ಯಮನೂರಪ್ಪ ಕಟ್ಟಿಮನಿ, ಶರಣಪ್ಪ ಚವ್ಹಾಣ, ಯಮನೂರಪ್ಪ ಭಾನಾಪುರ, ರಾಘವೇಂದ್ರ ಬಳಿಗೇರಿ, ನಾಗರಾಜ ಭಾನಾಪುರ, ಮಹೇಶ ಕಾರಭಾರಿ, ಕುಮಾರ ಬಳಿಗೇರಿ, ಗೋಲಪ್ಪ ಹೊನ್ನುಂಚಿ, ಕಂದಾಯ ಇಲಾಖೆ ಅಧಿಕಾರಿಗಳಾದ ಮಹ್ಮದ್ ಮುಸ್ತಫಾ, ಗಿರೀಶ್, ಮಹಾದೇವ, ದೇವಪ್ಪ ಇತರರಿದ್ದರು.