ಅಳವಂಡಿ ಗ್ರಾಪಂನಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಸದಸ್ಯರಾದ ಗುರು ಬಸವರಾಜ, ರೇಣುಕಪ್ಪ, ಹನುಮಂತಪ್ಪ ಮೂಲಿಮನಿ, ಮಂಜುನಾಥ ಬೆದವಟ್ಟಿ, ಹನುಮಂತಪ್ಪ ಮೋರನಾಳ, ವಿಶ್ವನಾಥ ದೋತರಗಾವಿ, ಭಾರತಿ ಬೆಣಕಲ್, ಹನುಮವ್ವ, ರೇಣುಕಾ ರೆಡ್ಡಿ, ಗೌಸಬೀ ತಟಗಾರ, ಸಿಆರ್‌ಪಿ ವಿಜಯಕುಮಾರ ಟಿಕಾರೆ ಇತರರಿದ್ದರು.
ಅಳವಂಡಿ: ಗಣರಾಜ್ಯೋತ್ಸವನ್ನು ಅದ್ದೂರಿಯಾಗಿ ಹಬ್ಬದಂತೆ ಆಚರಿಸೋಣ ಎಂದು ಪಿಡಿಒ ಕೊಟ್ರಪ್ಪ ಅಂಗಡಿ ಹೇಳಿದರು.
ಗ್ರಾಮದ ಗ್ರಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ಎಲ್ಲ ಅಧಿಕಾರಿಗಳು ಧ್ವಜಾರೋಹಣ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂದರು. ಗಣರಾಜ್ಯೋತ್ಸವ ಅಂಗವಾಗಿ ಗ್ರಾಪಂ ಕಟ್ಟಡವನ್ನು ತಳಿರು, ತೋರಣದಿಂದ ಅಲಂಕರಿಸಲು ನಿರ್ಧರಿಸಲಾಯಿತು. ಎಲ್ಲ ಶಾಲೆ-ಕಾಲೇಜುಗಳ ಮಕ್ಕಳು ಧ್ವಜಾರೋಹಣ ಬಳಿಕ ಗ್ರಾಮದಲ್ಲಿ ಪ್ರಭಾತ್‌ಪೇರಿ ನಡೆಸಿ ಗ್ರಾಪಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಚರ್ಚಿಸಲಾಯಿತು.