ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಭೂಮಿ ದಿನ ನಿಮಿತ್ತ ಹಮ್ಮಿಕೊಂಡ ಭೂನಮನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ , ಡಾ. ಸರರಾಜ್ ಅಹ್ಮದ್, ಡಾ.ಕೆ.ವಿರೂಪಾಕ್ಷ, ಪೆನಜಾ ಇತರರಿದ್ದರು. 
ಕೊಪ್ಪಳ

ಭೂಗ್ರಹ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಗಡಿಪ್ರದೇಶ
  • ನೆಲ
  • ಮನವಿ
ಗಂಗಾವತಿ: ಭೂಮಿ ಎಂದರೆ ಕೇವಲ ಮಣ್ಣಲ್ಲ. ಇಡೀ ಭೂಮಂಡಲವಾಗಿದೆ. ಭೂ ಗ್ರಹವೇ ಜೀವರಾಶಿಗಳಿಗೆಲ್ಲಾ ಸಕಲವನ್ನೂ ಒದಗಿಸುವ ನೆಲೆಯಾಗಿದೆ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಭೂಮಿ ದಿನ ನಿಮಿತ್ತ ಬುಧವಾರ ಹಮ್ಮಿಕೊಂಡ ಭೂನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ದೇಶಗಳು ಅವರವರ ಗಡಿಪ್ರದೇಶದ ಒಳಗಿನ ನೆಲವನ್ನು ಮಾತಭೂಮಿ ಎನ್ನುವರು. ಆದರೆ ಭೂಗ್ರಹವು ಎಲ್ಲ ರಾಷ್ಟ್ರಗಳ ಮಾತಭೂಮಿಗಳಿಗೆಲ್ಲಾ ಮಾತೆಯಾಗಿದೆ. ನಾವೆಲ್ಲರೂ ಪರಿಸರದಲ್ಲಿನ ಮಾಲಿನ್ಯ ತಡೆಗಟ್ಟಿ, ಪರಿಸರ ಪ್ರಜ್ಞೆಯೊಂದಿಗೆ, ಸುಸ್ಥಿರ ಅಭಿವದ್ಧಿ ಮಾಡುತ್ತಾ, ಭೂಗ್ರಹವನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ಶಂಕ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ವೀರೇಶ, ರವಿಕುಮಾರ, ಡಾ.ಶಶಿಕುಮಾರ, ಉಪನ್ಯಾಸಕರಾದ ವೆಂಕಟರಾಜು, ದೇವರಾಜ, ಬಾಲಚಂದ್ರಪ್ಪ, ವೀರೇಶ, ಮಲ್ಲಯ್ಯ, ಡಾ.ಅಯ್ಯಪ್ಪ, ಸಾಯಿಕುಮಾರ್, ಈಶಪ್ಪ, ಪೆನಜಾ, ಡಾ.ರಸೂಲಸಾಬ್, ಜಬೀನಾ ಬೇಗಂ ಇತರರಿದ್ದರು.