ಕನಕಗಿರಿ ತಾಲೂಕಿನ ಹಿರೇಮಾದಿನಾಳ ಗ್ರಾಮಸ್ಥರು ಚಿಕ್ಕಮಾದಿನಾಳ ಗ್ರಾಪಂ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಉಮೇಶ ಬಡಿಗೇರ, ಹನುಮಂತಪ್ಪ ಗೌಡ್ರ, ಮಾದಿನಾಳಪ್ಪ ಜಿನ್ನಾಪುರ, ಹೊಳಿಯಪ್ಪ ಹೊಸೂರು, ಸಣ್ಣೆಪ್ಪ ಗೌಡ್ರ, ಮಲಿಯಪ್ಪ ಬಳ್ಳೊಳ್ಳಿ, ಲೋಕಪ್ಪ ಗೌಡ್ರ, ರಾಮನಗೌಡ, ಉಮೇಶ ಬಡಿಗೇರ, ರಾಜಾಸಾಬ ಕೊತ್ವಾಲ, ಶಿವಮೂರ್ತಿ ಹರಿಜನ ಇತರರಿದ್ದರು.
- ಪ್ರತಿಭಟನೆ
- ಕೂಲಿ ಹಣ
- ಕಾರ್ಮಿಕರು
ಕೂಲಿ ಹಣ ಸಮರ್ಪಕವಾಗಿ ನೀಡಲಿ
ಕನಕಗಿರಿ: ನರೇಗಾ ಕೂಲಿ ಹಣ ಸಮರ್ಪಕವಾಗಿ ನೀಡದಿದ್ದಕ್ಕೆ ತಾಲೂಕಿನ ಹಿರೇಮಾದಿನಾಳದ ಕೂಲಿ ಕಾರ್ಮಿಕರು ಗುರುವಾರ ಚಿಕ್ಕಮಾದಿನಾಳ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಿರೇಮಾದಿನಾಳ ಗ್ರಾಮದ 400ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ನರೇಗಾದಡಿ ರಾಮದುರ್ಗದ ಕೆರೆಯಲ್ಲಿ 14 ದಿನಗಳ ಕಾಲ ಹೂಳು ತೆಗೆಯುವ ಕೆಲಸ ಮಾಡಿದ್ದಾರೆ. ಆದರೆ, ಕಾರ್ಮಿಕರ ಖಾತೆಗೆ ದಿನಕ್ಕೆ 310 ರೂ.ನಂತೆ ಕೂಲಿ ಹಣ ಜಮೆಯಾಗಿದೆ.
10 ಕಿಮೀ ದೂರದ ರಾಮದುರ್ಗದ ಕೆರೆಗೆ ಹೋಗಿ ಬರಲು ದಿನನಿತ್ಯ 60 ರೂ. ಖರ್ಚಾಗಿದೆ. ಸರ್ಕಾರದ ಯೋಜನೆಯಲ್ಲಿ ಕೂಲಿ ಹಣ ದಿನಕ್ಕೆ 375 ರೂ. ಇದ್ದು, ನಮಗೆ ಕೇವಲ 310 ರೂ.ನಂತೆ ನೀಡಲಾಗಿದೆ.
ಈ ಕುರಿತು ಅಧಿಕಾರಿಗಳಿಗೆ ಕೇಳಿದರೆ ನೀವು ಕೆಲಸ ಮಾಡಿದಷ್ಟು ಹಣ ದೊರೆತಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.
ಪ್ರಮುಖರಾದ ಉಮೇಶ ಬಡಿಗೇರ, ಹನುಮಂತಪ್ಪ ಗೌಡ್ರ, ಮಾದಿನಾಳಪ್ಪ ಜಿನ್ನಾಪುರ, ಹೊಳಿಯಪ್ಪ ಹೊಸೂರು, ಸಣ್ಣೆಪ್ಪ ಗೌಡ್ರ, ಮಲಿಯಪ್ಪ ಬಳ್ಳೊಳ್ಳಿ, ಲೋಕಪ್ಪ ಗೌಡ್ರ, ರಾಮನಗೌಡ, ಉಮೇಶ ಬಡಿಗೇರ, ರಾಜಾಸಾಬ ಕೊತ್ವಾಲ, ಶಿವಮೂರ್ತಿ ಹರಿಜನ, ಹನುಮಮ್ಮ ಗೌಡ್ರ, ಹನುಮಮ್ಮ ಬಾವಿಕಟ್ಟಿ, ಜಡಿಯಪ್ಪ ಉಪ್ಪಾರ, ಹುಲಿಗೆಮ್ಮ ಜಿನ್ನಾಪುರ, ಹನುಮಮ್ಮ ಹರಿಜನ, ಆಶಾಬೀ, ಶೇಖಮ್ಮ ಉಪ್ಪಾರ, ಅಂಬಮ್ಮ ಮಡಿವಾಳ ಇತರರಿದ್ದರು.