ಅಳವಂಡಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಪ್ರಮುಖರಾದ ಪ್ರತಾಪ ಬಾವಿಹಳ್ಳಿ, ವೆಂಕಟೇಶ, ರಾಜು, ಪೃಥ್ವಿ, ನಂದೀಶ, ಹನುಮೇಶ, ರಫಿ, ಗವಿಸಿದ್ದಪ್ಪ ಇತರರಿದ್ದರು.
- ವಿವಿಧ ಕ್ಷೇತ್ರಗಳ ಸಾಧಕರು, ಸೈನಿಕರ ಕುಟುಂಬಸ್ಥರಿಗೆ ಸನ್ಮಾನ
ಅಳವಂಡಿ: ಕಾರ್ಗಿಲ್ ವಿಜಯ ದಿವಸ್ ಕೇವಲ ಆಚರಣೆಯಲ್ಲ. ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಎಂದು ಯುವ ಮುಖಂಡ ಪ್ರತಾಪ ಬಾವಿಹಳ್ಳಿ ತಿಳಿಸಿದರು.
ಕಾರ್ಗಿಲ್ ಹುತಾತ್ಮ ವೀರಯೋಧ ಮಲ್ಲಯ್ಯ ಮೇಗಳಮಠ ಅವರ ಸ್ಮಾರಕದ ಬಳಿ ಭಾನುವಾರ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಗಡಿಯನ್ನು ಹಗಲಿರುಳು ಕಾಯುವ ವೀರ ಯೋಧರ ತ್ಯಾಗ, ಬಲಿದಾನ ಹಾಗೂ ಸೇವೆಯಿಂದಲೇ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಯುವಜನತೆ ದೇಶದ ಅಭಿವೃದ್ಧಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸೈನಿಕರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವೆಂಕಟೇಶ ಬಿಸರಳ್ಳಿ, ರಾಜು ಗೊಲ್ಲಗೌಡರ, ಪೃಥ್ವಿ ಹಕ್ಕಂಡಿ, ನಂದೀಶ ಬೆಟಗೇರಿ, ಹನುಮೇಶ ಪಾಟೀಲ, ರಫಿ, ಗವಿಸಿದ್ದಪ್ಪ ಕೊಗಳಿ, ಮಾರುತಿ ತಳವಾರ, ಮಹಾಂತೇಶ ಕೊಗಳಿ, ಗಣೇಶ, ವೀರೇಶ ಕಲಾದಗಿ, ಕೊಟ್ರೇಶ ಕವಡಿಮಟ್ಟಿ, ವಿರೂಪಾಕ್ಷ ಅರ್ಕಸಾಲಿ, ಜಗದೀಶ ಅರ್ಕಸಾಲಿ ಇತರರಿದ್ದರು.