ಹಿರೇಮನ್ನಾಪೂರ ಗ್ರಾಮದಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ನಿವೃತ್ತ ಶಿಕ್ಷಕ ಹಾಗೂ ರಂಗಭೂಮಿ ನಿರ್ದೇಶಕ ವಿ.ಎಸ್.ಕಾಡಗಿಮಠ, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇಮಾಂಸಾಬ್ ಕೋಳೂರು, ಪುಣ್ಯಕೋಟಿ ಸಂಸ್ಥೆಯ ಅಧ್ಯಕ್ಷ ವಾ.ಹ.ಯಕ್ಕರನಾಳ್, ಶ್ರೀಗುರುಶಂಕರ ಲಿಂಗಮಠದ ಧರ್ಮಾಧಿಕಾರಿ ಡಾ.ಬಾಲಚಂದ್ರಪ್ಪಜ್ಜ ಇತರರಿದ್ದರು.
ಕುಷ್ಟಗಿ: ಪೂರ್ವಜರಿಂದ ಬಂದ ಭಜನೆ, ಸೋಬಾನೆ, ಗೀಗಿ ಹಾಡುವುದು, ಕುಟ್ಟುವುದು ಬೀಸುವುದು ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ರಂಗಭೂಮಿ ನಿರ್ದೇಶಕ ವಿ.ಎಸ್.ಕಾಡಗಿಮಠ ಹೇಳಿದರು.
ಹಿರೇಮನ್ನಾಪೂರ ಗ್ರಾಮದ ಶ್ರೀ ಗುರು ಶಂಕರಲಿಂಗ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಲಾದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಚೆಗೆ ನಾಟಕಗಳಲ್ಲಿ ಅಶ್ಲೀಲ ಹಾಡುಗಳ ಹಾವಳಿಗೆ ನಮ್ಮ ನೆಲ ಮೂಲದ ಕಲೆ ಸಂಸ್ಕೃತಿಯ ಕೊಂಡಿಗಳು ಒಂದೊಂದೆ ಕಳಚುತ್ತಿವೆ. ಜಾನಪದ ಸಂಸ್ಕೃತಿಯ ಬಗ್ಗೆ ಯುವ ಪೀಳಿಗೆಗೆ ಪರಿಚಯಿಸಿ ಆಸಕ್ತಿತೋರುವಂತೆ ಮಾಡಬೇಕಿದೆ ಎಂದರು.
ಕಲಾವಿದ ದೇವೇಂದ್ರಪ್ಪ ಕಮ್ಮಾರ್ ಸುಗಮ ಸಂಗೀತ ಭಕ್ತಿಗೀತೆ ನಡೆಸಿಕೊಟ್ಟರು. ಕಲಾವಿದರಾದ ಸುಖಮುನಿ ದೋಟಿಹಾಳ, ಹನಮಂತಪ್ಪ ಜಾಲಿಮರದ, ಸುರೇಶ ಕಾಡಗಿಮಠ, ಭಾಷಾಸಾಬ್, ಸೈಯದ್ ಮುರ್ತುಜಾ, ಮುಖಂಡರಾದ ಶರಣಗೌಡ ಪಾಟೀಲ್, ದೇವಣ್ಣ ಬಳಿಗಾರ್, ಹನಮಂತಪ್ಪ, ಹುಸೇನಸಾಬ್ ಅಗಸಿಮುಂದಿನ್, ಮಲಕಪ್ಪ ತೋಟದ್, ಬಾಳಪ್ಪ ಪೂಜಾರ್, ಕರಿಯಪ್ಪ ಚಾಮಲಾಪೂರ ಇನ್ನಿತರರು ಇದ್ದರು.