ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಟಾರ್ಗೆಟ್40+ ಅನುಷ್ಠಾನದ ಅಂಗವಾಗಿ ಮಕ್ಕಳಿಗೆ ಸರಳ ಗಣಿತ ಚಾರ್ಟ್‌ಗಳನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ಶಿಕ್ಷಕರಾದ ಗಿರಿಯಪ್ಪ, ರವಿಕಿರಣ್, ಪ್ರಕಾಶರೆಡ್ಡಿ, ಮರ್ದಾನಲಿ, ರಾಜಾಸಾಬ, ಶಾಂತಂವೀರಯ್ಯ, ಸುನೀತಾ ಸೋಮಣ್ಣ, ಪರಶುರಾಮ ಇತರರಿದ್ದರು.
- ಫಲಿತಾಂಶ
- ಸುಧಾರಣೆಗಾಗಿ
- ಟಾರ್ಗೆಟ್
ಅಳವಂಡಿ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಸತತ ಅಭ್ಯಾಸ ಮಾಡಿದಾಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂದು ಗಣಿತ ಶಿಕ್ಷಕ ಮರ್ದಾನಲಿ ಗಡಾದ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಟಾರ್ಗೆಟ್ 40+ಅನುಷ್ಠಾನದ ಅಂಗವಾಗಿ ಮಕ್ಕಳಿಗೆ ಸರಳ ಗಣಿತ ಚಾರ್ಟ್ ಗಳನ್ನು ವಿತರಿಸಿ ಶನಿವಾರ ಮಾತನಾಡಿದರು. ಗಣಿತ ಕಷ್ಟದ ವಿಷಯವಲ್ಲ. ಇಷ್ಟ ಪಟ್ಟು ಅಭ್ಯಾಸ ಮಾಡಿದರೆ ಸುಲಭವಾಗುತ್ತದೆ. ಟಾರ್ಗೆಟ್- 40+ ಈಡೇರಬೇಕಾದರೆ ಈ ಚಾರ್ಟ್ ಪರೀಕ್ಷಾ ದೃಷ್ಟಿಯಿಂದ ಅತೀ ಮುಖ್ಯವಾಗಿದೆ ಎಂದರು.
ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿದರು. ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರವಿಕಿರಣ ಟಿಕಾರೆ, ಪ್ರಕಾಶರೆಡ್ಡಿ ಗೋವಿಂದರೆಡ್ಡಿ, ರಾಜಾಸಾಬ ಬಳಿಗೇರ, ಶಾಂತಂವೀರಯ್ಯ ಕಳ್ಳಿಮಠ, ಸುನೀತಾ ಯಾಳಗಿ ಸೋಮಣ್ಣ ತಳಕಲ, ಪರಶುರಾಮ ಯಡವಟ್ಟಿ ಇತರರಿದ್ದರು.