ಗುಮಗೇರಾ ಸೌರ ವಿದ್ಯುತ್ ಉತ್ಪಾದನಾ ಘಟಕದ ಬಳಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತಪರ ಹೋರಾಟ ಸಂಘದ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಹನಮೇಶ. ಎಸ್.ಎಚ್. ಶಾಖಾಪೂರ, ಜಿಲ್ಲಾ ಕಾರ್ಯಾಧ್ಯಕ್ಷ ಹೊನ್ನಪ್ಪ ಎಚ್. ತಳವಾರ, ತಾಲೂಕು ಉಪಾಧ್ಯಕ್ಷ ಚಂದ್ರು ಪಾಟೀಲ್ ಇತರರಿದ್ದರು. 
ಕೊಪ್ಪಳ

ಕಾರ್ಮಿಕರ ನ್ಯಾಯಯುತ ಬೇಡಿಕೆ ಈಡೇರಿಸಲಿ

ಪ್ರಮುಖ ಮುಖ್ಯಾಂಶಗಳು

  • ರೈತಪರ
  • ಹೋರಾಟ
  • ಪದಾಧಿಕಾರಿಗಳು
ಕುಷ್ಟಗಿ: ತಾಲೂಕಿನ ಗುಮಗೇರಾ ಗ್ರಾಮ ಸೀಮಾದ ಸೌರ ವಿದ್ಯುತ್ ಉತ್ಪಾದನಾ ಘಟಕದ ಹತ್ತಿರ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತಪರ ಹೋರಾಟ ಸಂಘ ಪದಾಧಿಕಾರಿಗಳು ಶನಿವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹನಮೇಶ ಎಸ್.ಎಚ್.ಶಾಖಾಪೂರ ಮಾತನಾಡಿ, ಕಾರ್ಮಿಕರ ಸೇವಾ ಭದ್ರತೆ ಹಾಗೂ ಭತ್ಯೆ ಹೆಚ್ಚಳ ಕಾರ್ಮಿಕರೊಂದಿಗೆ ಚರ್ಚಿಸಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಮೌಖಿಕವಾಗಿ ಒಪ್ಪಿಕೊಂಡಿದ್ದರು. 18 ಜನ ಸೆಕ್ಯೂರಿಟಿ ಗಾರ್ಡ್, 2 ಜನ ಮೇಲ್ವಿಚಾರಕರು, 13 ಜನ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಮತ್ತು ಒಬ್ಬ ಸೂಪರ್‌ವೈಸರ್, ಅರಿಯಸ್ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ.
ಕಂಪನಿಯವರು ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದು ಈವರೆಗೆ ಕಾರ್ಮಿಕರಿಗೆ ಸವಲತ್ತು ಸಿಗದೇ ಪರಿತಪಿಸುವಂತಾಗಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ಕಂಪನಿಯಲ್ಲಿ 11ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೆ ಪಿ.ಎಫ್ ಜಮಾ ಮಾಡಿಲ್ಲ ಎಂದು ದೂರಿದರು.
ಸಹ ಕಾರ್ಯದರ್ಶಿ ಮಾರುತಿ ಜರಗಡ್ಡಿ, ಪದಾಧಿಕಾರಿಗಳಾದ ಬಸನಗೌಡ.ಎನ್.ಗೌಡ್ರು, ಗ್ಯಾನಪ್ಪ ವೈ.ಗುರಿಕಾರ್, ಶಿವಶರಣಪ್ಪ ಗುರಿಕಾರ್, ಶರಣಪ್ಪ ಅಕ್ಕಿ ಹುಗ್ಗಿ ಇನ್ನಿತರರಿದ್ದರು.