ಚಿಕ್ಕಮಾದಿನಾಳದಲ್ಲಿ ಭಾನುವಾರ ಜಯಂತಿ ನಿಮಿತ್ತ ವಾಲ್ಮೀಕಿ ವೃತ್ತಕ್ಕೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಕೆಡಿಪಿ ಮಾಜಿ ಸದಸ್ಯ ಗುರುನಗೌಡ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಗೌರವಾಧ್ಯಕ್ಷ ಮುದಿಯಪ್ಪ ನಾಯಕ ಇತರರಿದ್ದರು. 
ಕೊಪ್ಪಳ

ವಾಲ್ಮೀಕಿಯನ್ನು ಹಿಂದು ಸಮಾಜ ಪೂಜಿಸಲಿ

ಕನಕಗಿರಿ: ಆದಿಕವಿ ಮಹರ್ಷಿ ವಾಲ್ಮೀಕಿಯು ಹಿಂದು ಸಮಾಜ ಆರಾಧಿಸುವ ರಾಮಾಯಣ ಗ್ರಂಥವನ್ನು ಜಗತ್ತಿಗೆ ನೀಡಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಹೇಳಿದರು.
ತಾಲೂಕಿನ ಚಿಕ್ಕಮಾದಿನಾಳ ಗ್ರಾಮದಲ್ಲಿ ನಾಯಕ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ಆರಂಭದ ಹೆಸರು ರತ್ನಾಕರನಾಗಿದ್ದು, ನಾರದ ಮುನಿಗಳ ಉಪದೇಶದಿಂದ ಶ್ರೀರಾಮನ ಭಕ್ತನಾಗಿ ರಾಮನ ಜಪ ಮಾಡುತ್ತಿರುವಾಗ ಸುತ್ತಲೂ ಹುತ್ತ ಬೆಳೆಯುತ್ತದೆ. ಹುತ್ತದಿಂದ ಋಷಿಮುನಿಯಾಗಿ ಹೊರಬಂದಿದ್ದರಿಂದ ರತ್ನಾಕರರು ವಾಲ್ಮೀಕಿ ಮಹರ್ಷಿಗಳಾಗಿ ಬದಲಾಗುತ್ತಾರೆ.
ಅವರಿಂದ ರಾಮನ ಇತಿಹಾಸವನ್ನು ವಿವರಿಸುವ 24 ಸಾವಿರಕ್ಕೂ ಹೆಚ್ಚು ಶ್ಲೋಕಗಳುಳ್ಳ ಹಿಂದು ಧರ್ಮಕ್ಕೆ ಕಳಸದಂತಿರುವ ರಾಮಾಯಣ ರಚಿತವಾಗುತ್ತದೆ. ಇಂತಹ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಇಡೀ ಹಿಂದು ಸಮಾಜ ಪೂಜಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ವಾಲ್ಮೀಕಿ ವೃತ್ತದಲ್ಲಿ ಪೂಜೆ ಸಲ್ಲಿಸಲಾಯಿತು. ವಾದ್ಯ ಹಾಗೂ ಕಲಾ ತಂಡಗಳೊಂದಿಗೆ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಲ್ಲಿಕಾರ್ಜುನಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಕೆಪಿಸಿಸಿ ಎಸ್‌ಟಿ ಬ್ಲಾಕ್ ಕಾರ್ಯದರ್ಶಿ ರಾಮನಗೌಡ ಬುನ್ನಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮೌನೇಶ ದಢೇಸುಗೂರು, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಗೌರವಾಧ್ಯಕ್ಷ ಮುದಿಯಪ್ಪ ನಾಯಕ, ಅಧ್ಯಕ್ಷ ನಾಗರಾಜ, ಉಪಾಧ್ಯಕ್ಷ ನಿಂಗಪ್ಪ ನಾಯಕ ನವಲಿ, ಪ್ರಮುಖರಾದ ಶರಣೇಗೌಡ ಹುಲಸನಟ್ಟಿ, ಶಶಾಂಕ ತಂಗಡಗಿ, ಬಸವರಾಜ ಗಾಣದಾಳ, ಸಣ್ಣ ಕನಕಪ್ಪ, ರಂಗಪ್ಪ, ಮಹಾಂತೇಶ ನಾಯಕ, ವೆಂಕಟೇಶ, ಹುಲಿಗೆಮ್ಮ ನಾಯಕ, ಪಂಪಾಪತಿ ಇತರರಿದ್ದರು.