ಹನುಮಸಾಗರದಲ್ಲಿ ಮಂಗಳವಾರ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಪಿಡಿಒ ನಿಂಗಪ್ಪ ಮೂಲಿಮನಿ ಉದ್ಘಾಟಿಸಿದರು. ತಾಲೂಕು ಆಯುಷ್ ವೈದ್ಯಾಧಿಕಾರಿ ವಿಜಯಲಕ್ಷ್ಮೀ ಮೆಹರವಾಡೆ, ವೈದ್ಯಾಧಿಕಾರಿ ಡಾ. ದೀಪಿಕಾ, ಗ್ರಂಥಪಾಲಕಿ ದುರಗಮ್ಮ ಹಿರೇಮನಿ ಇತರರಿದ್ದರು. 
ಕೊಪ್ಪಳ

ಹಿರಿಯರು ಆರೋಗ್ಯದ ಕಾಲಜಿ ವಹಿಸಲಿ

ಹನುಮಸಾಗರ: ಹಿರಿಯ ನಾಗರಿಕರು ಪ್ರತಿ ತಿಂಗಳು ಆರೋಗ್ಯ ತಪಾಸಾಣೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ ಮೆಹರವಾಡೆ ಹೇಳಿದರು.
ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಾಟಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು. ಇಂದು ಅಸಂಕ್ರಾಮಿಕ ರೋಗಗಳು ಬಹಳಷ್ಟು ಜನರನ್ನು ಕಾಡುತ್ತಿವೆ. ಹಿರಿಯ ನಾಗರಿಕರು ಆರೋಗ್ಯವಂತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಮಾಂಸ ಕಂಡಗಳ ಹಿಡಿತ ತಪ್ಪಿಸಲು ಪ್ರತಿನಿತ್ಯ ಯೋಗಸಾನ, ವ್ಯಾಯಾಮ ಮಾಡಬೇಕು. ಕಾಲ ಕಾಲಕ್ಕೆ ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿಸಿಕೊಳ್ಳಬೇಕು. ಆಹಾರ ಪದಾರ್ಥದಲ್ಲಿ ಬದಲಾವಣೆ ಅವಶ್ಯಕ. ಸಕ್ಕರೆ, ಮೈದಾ, ಬಿಳಿ ಉಪ್ಪು, ಪಾಲಿಸ್ ಅಕ್ಕಿ, ಕಾಯಿಸದೇ ಇರುವ ಹಾಲು ಸೇವಿಸಬಾರದು. ಸಮತೋಲನ ಆಹಾರ ಹಾಗೂ ನಿಯಮಿತ ವ್ಯಾಯಾಮ ಅತ್ಯಗತ್ಯ ಎಂದರು.
ಪಿಡಿಒ ನಿಂಗಪ್ಪ ಮೂಲಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈದ್ಯಾಧಿಕಾರಿ ದೀಪಿಕಾ, ಆರೋಗ್ಯ ಇಲಾಖೆ ಸಿಬ್ಬಂದಿ ಸುಧಾಕರ, ಚನ್ನಬಸಪ್ಪ ಹನುಮನಾಳ, ಎ.ಎಸ್. ಅಂತರಗಂಗಿ, ಬೀರಪ್ಪ ವಡಗಲಿ, ಸಿದ್ಧಲಿಂಗರಡ್ಡಿ, ಗ್ರಂಥಪಾಲಕಿ ದುರಗಮ್ಮ ಹಿರೇಮನಿ, ಗ್ರಾಪಂ ಸಿಬ್ಬಂದಿ ಮಹಾಂತಯ್ಯ ಕೋಮಾರಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.