ಗಂಗಾವತಿಯಲ್ಲಿ ಡಿವೈಎಫ್‌ಐ ತಾಲೂಕು ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ್, ಪದಾಧಿಕಾರಿಗಳಾದ ತಿಮ್ಮಣ್ಣ ನಾಯಕ, ತಿರುಪತಿ ನಾಯಕ, ಕೃಷ್ಣಮೂರ್ತಿ ಸಂಗಾಪುರ ಇತರರಿದ್ದರು. 
ಕೊಪ್ಪಳ

ಸಂವಿಧಾನಬದ್ಧ ಅನುದಾನ ಸದ್ಬಳಕೆಯಾಗಲಿ

ಶಾಮಸುಂದರ್ ಕೊಪ್ಪಳಕರ್

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನ ಮತ್ತು ಇತರ ಯೋಜನೆಗಳು ಸಮರ್ಪಕ ಬಳಕೆಯಾಗಬೇಕು. ಸಂವಿಧಾನಬದ್ಧವಾಗಿ ಈ ಭಾಗದ ನೈಜ ಅಭಿವೃದ್ಧಿ ಯಾಗಬೇಕಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವ ಫೆಡರೇಷನ್ (ಡಿವೈಎಫ್‌ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಹೇಳಿದರು.

ನಗರದ ಸದ್ಭಾವನ ಸಮುದಾಯ ಭವನದಲ್ಲಿ ಡಿವೈಎಫ್‌ಐ ತಾಲೂಕು ಘಟಕದಿಂದ ಗುರುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ಭಾಗಕ್ಕೆ ಮೀಸಲಾದ ಅನುದಾನವು ನಿರುದ್ಯೋಗಿಗಳ ಕೌಶಲಾಭಿವೃದ್ಧಿಗೆ ಪೂರ್ಣಪ್ರಮಾಣದಲ್ಲಿ ಬಳಕೆಯಾಗಬೇಕು. ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದ ನಿರುದ್ಯೋಗಿಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ದೊರೆಯಬೇಕು ಎಂದು ಆಗ್ರಹಿಸಿದರು.
ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ್ ಮಾತನಾಡಿ, ಕಕ ಭಾಗದ 7 ಜಿಲ್ಲೆಗಳಿಗೆ ದೊರೆಯಬೇಕಾದ ಸಂವಿಧಾನಬದ್ಧ ಹಕ್ಕುಗಳನ್ನು ನಿಯಮಾನುಸಾರ ತಲುಪಿಸುವ ಕೆಲಸವಾಗಬೇಕು ಎಂದರು. ಪದಾಧಿಕಾರಿಗಳಾದ ತಿಮ್ಮಣ್ಣ ನಾಯಕ, ತಿರುಪತಿ ನಾಯಕ, ಕೃಷ್ಣಮೂರ್ತಿ ಸಂಗಾಪುರ, ಹುಸೇನಪ್ಪ ಹಂಚಿನಾಳ, ಟಿಪ್ಪು, ಮಹಮ್ಮದ್ ಷರೀಫ್, ದುರಗೇಶ, ಅಮರೇಶ ಗುರಿಕಾರ, ರಾಘವೇಂದ್ರ, ಶರಣಪ್ಪ, ಬಾಲಪ್ಪ, ಮಾರುತಿ, ಅನಿಲ್ ಸಿಂಗ್, ಪರಶುರಾಮ್ ಇತರರಿದ್ದರು.