ಗಂಗಾವತಿ ತಾಲೂಕಿನ ಸೂರ್ಯನಾಯಕನ ತಾಂಡದಲ್ಲಿ ಬಂಜಾರ ಸಮಾಜದಿಂದ ಸಂತ ಸೇವಾಲಾಲ್ ಜಯಂತ್ಯುತ್ಸವ ಆಚರಿಸಲಾಯಿತು. ಗ್ರಾಪಂ ಸದಸ್ಯೆ ಗೌರಮ್ಮ ಶಂಕರ ನಾಯ್ಕ, ಮಾಜಿ ಸದಸ್ಯ ಶಂಕರ ನಾಯ್ಕ, ಮುಖಂಡರಾದ ಹನುಮಂತಪ್ಪ ಕಟ್ಟಿಮನಿ, ಪೂಜಾರಿ ಹನುಮಂತಪ್ಪ ಇತರರಿದ್ದರು.
- ಹಿರಿಯ ಮುಖಂಡ ಕೆ.ಆರ್.ಕೀರಪ್ಪ ಸಲಹೆ
- ವಿವಿಧೆಡೆ ಸಂತ ಸೇವಾಲಾಲ್ ಜಯಂತ್ಯುತ್ಸವ
ಗಂಗಾವತಿ: ನಗರದ ವಿರುಪಾಪುರ ತಾಂಡದ ಸೇವಾಲಾಲ್ ವೃತ್ತದಲ್ಲಿ ಬಂಜಾರ ಸಮಾಜ, ಶ್ರೀ ಸೇವಾಲಾಲ್ ಬಂಜಾರ ಯುವಕ ಸಂಘ ಮತ್ತು ಶ್ರೀ ಸೇವಾಲಾಲ್ ಕಟ್ಟಡ ಕಾರ್ಮಿಕರ ಸಂಘದಿಂದ ಸದ್ಗುರು ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಹಿರಿಯ ಮುಖಂಡ ಕೆ.ಆರ್.ಕೀರಪ್ಪ ಮಾತನಾಡಿ, ಬಂಜಾರಾ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿದ್ದು, ಸಂಘಟನಾತ್ಮಕವಾಗಿ ಹಕ್ಕುಗಳನ್ನು ಪಡೆಯುವಂತೆ ಸಲಹೆ ನೀಡಿದರು.
ನಗರಸಭೆ ಮಾಜಿ ಸದಸ್ಯ ರಾಮಾನಾಯ್ಕ, ಸಮಾಜದ ಮುಖಂಡರಾದ ಪಾಂಡುನಾಯ್ಕ, ಶಿವಪ್ಪ ಜಾಗೋಗೋರ್, ಹನುಮಂತ, ಕೃಷ್ಣನಾಯ್ಕ, ವೆಂಕಟೇಶ ಜಾಧವ್, ರವಿಚಂದ್ರ, ಸಂತೋಷ, ಅಮರೇಶ, ಟಾಕಾನಾಯ್ಕ, ವೆಂಕಟೇಶ, ಪಾಂಡು ನಾಯ್ಕ ಇತರರಿದ್ದರು.
ತಾಲೂಕಾಡಳಿತ ಸೌಧದ ಕಚೇರಿ: ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಕಂದಾಯ ಇಲಾಖೆಯಿಂದ ಶ್ರೀ ಸದ್ಗುರು ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿದರು. ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಸುಧಾ, ರೇಣುಕಮ್ಮ, ಅಯ್ಯಣ್ಣ, ಈರಪ್ಪ, ವಿವಿಧ ಸಮಾಜದ ಮುಖಂಡರಾದ ಭರಮಣ್ಣ, ಯಮುನೇಶ, ಈಶಪ್ಪ, ಆನಂದ ಅರಳಹಳ್ಳಿ ಇತರರಿದ್ದರು.
ಶ್ರೀರಾಮನಗರ: ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಮನುಕುಲಕ್ಕೆ ಬೇಕಾದ ಮಾನವೀಯ ಮೌಲ್ಯಗಳನ್ನು ಮುನ್ನೆಲೆಗೆ ತಂದವರು ಸಂತ ಸೇವಾಲಾಲರು ಎಂದರು. ಸಿಬ್ಬಂದಿ ಶಾಂತಮ್ಮ, ಚಿನ್ನವರಪ್ರಸಾದ ಇತರರಿದ್ದರು.
ಸೂರ್ಯನಾಯಕನ ತಾಂಡ: ತಾಲೂಕಿನ ಸೂರ್ಯನಾಯಕನ ತಾಂಡದಲ್ಲಿ ಬಂಜಾರ ಸಮಾಜದಿಂದ ಸಂತ ಸೇವಾಲಾಲ್ ಜಯಂತ್ಯುತ್ಸವ ಆಚರಿಸಲಾಯಿತು. ಸಾಂಪ್ರದಾಯಿಕ ಮೆರವಣಿಗೆಗೆ ಚಾಲನೆ ನೀಡಿದ ಗ್ರಾಪಂ ಮಾಜಿ ಸದಸ್ಯ ಶಂಕರನಾಯ್ಕ ಮಾತನಾಡಿ, ದುಡಿಮೆ, ಜ್ಞಾನಾರ್ಜನೆ, ಸ್ವಾಭಿಮಾನ, ಸ್ವಾವಲಂಬನೆ ಕುರಿತು ಸೇವಾಲಾಲರು ಸಮಾಜಕ್ಕೆ ಅರಿವು ಮೂಡಿಸಿದ್ದಾರೆ ಎಂದರು. ಗ್ರಾಪಂ ಸದಸ್ಯೆ ಗೌರಮ್ಮ ಶಂಕರನಾಯ್ಕ, ಮುಖಂಡರಾದ ಹನುಮಂತಪ್ಪ ಕಟ್ಟಿಮನಿ, ಪೂಜಾರಿ ಹನುಮಂತಪ್ಪ, ಕೆ.ಶಂಕ್ರಪ್ಪ, ಶಂಕ್ರಪ್ಪ, ಯಮನೂರ, ಶಿವಪ್ಪ, ಪಂಪಾಪತಿ, ಕುಮಾರ, ಮಂಜುನಾಥ, ಶಿವು, ಪಾರಮ್ಮ ಕಟ್ಟಿಮನಿ, ಲಾಲಮ್ಮ, ಶಾಂತಮ್ಮ, ಗುಂಡಮ್ಮ ಇತರರಿದ್ದರು.
ಢಣಾಪುರ: ತಾಲೂಕಿನ ಢಣಾಪುರದಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಮಹಿಳೆಯರ ಕುಂಭದೊಂದಿಗೆ ಸಾಂಪ್ರದಾಯಿಕ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಪೂಜೆ, ಪ್ರಸಾದ ವಿತರಣೆ ಜರುಗಿತು. ಮುಖಂಡರಾದ ರಾಮಸ್ವಾಮಿ, ಗೋವಿಂದಪ್ಪ, ಭೋಜರಾಜ, ಆನಂದ, ಫೂಲ್‌ಸಿಂಗ್, ಬಲರಾಮ, ವೆಂಕಟೇಶ, ರಾಜೇಶ, ರವಿ, ತಿರುಪತಿ, ಜಗದೀಶ, ಶ್ರೀಕಾಂತ, ಗಣೇಶ, ಸಂದೀಪ ಇತರರಿದ್ದರು.