ಗಂಗಾವತಿ ಪೈ ಮೆಡಿಕಲ್ ಅಕಾಡೆಮಿಯ ಬಿಬಿಸಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವವನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಡಾ.ಚಂದ್ರಶೇಖರ್ ಚಿನಿವಾಲರ್, ಅಕಾಡೆಮಿ ಸಂಸ್ಥಾಪಕರಾದ ಎಸ್.ವಿನೋದಕುಮಾರ, ಕೆ.ಗಾಂಧಿ ಇತರರಿದ್ದರು.
- ಶಾಸಕ ಗಾಲಿ ಜನಾರ್ದನರೆಡ್ಡಿ ಸಲಹೆ
- ಗಂಗಾವತಿ ಬಿಬಿಸಿ ಪಿಯು ಕಾಲೇಜ ವಾರ್ಷಿಕೋತ್ಸವ
ಗಂಗಾವತಿ: ದೂರದೃಷ್ಟಿ ಮತ್ತು ಪಾಲಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಸಲಹೆ ನೀಡಿದರು.
ನಗರದ ಪೈ ಮೆಡಿಕಲ್ ಅಕಾಡೆಮಿಯ ಬಿಬಿಸಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕರಿಂದಲೇ ಸ್ಥಾಪಿತವಾದ ಅಕಾಡೆಮಿಯಾಗಿದ್ದು, ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತಿದ್ದಾರೆ. ನಿರಂತರ ಅಧ್ಯಯನ ಮತ್ತು ನಿರೀಕ್ಷಿತ ಗುರಿಯೊಂದಿಗೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕಿದೆ. ಕನ್ನಡ ಶಾಲೆ ಮಕ್ಕಳಿಗೆ ವಿಶೇಷ ಆದ್ಯತೆ ನೀಡುತ್ತಿದ್ದು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪಡೆಯಲು ಸಂಸ್ಥೆ ನೆರವಾಗಿದೆ ಎಂದರು.
ಸಂಸ್ಥೆ ಅಧ್ಯಕ್ಷ ಡಾ.ಚಂದ್ರಶೇಖರ್ ಚಿನಿವಾಲರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಉದ್ಯಮಿಗಳಾದ ಅಕ್ಕಿ ಮಲ್ಲಿಕಾರ್ಜುನ, ನೀಲಂಗೌಡ, ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಎ.ಕೆ.ಮಹೇಶಕುಮಾರ, ಅಕಾಡೆಮಿ ಸಹ ಸಂಸ್ಥಾಪಕರಾದ ಎಸ್.ವಿನೋದಕುಮಾರ, ಕೆ.ಗಾಂಧಿ, ಪ್ರವೀಣಕುಮಾರ ತರರಿದ್ದರು.