ಗಂಗಾವತಿ ಐಎಂಎ ಹಾಲ್‌ನಲ್ಲಿ ಆಯೋಜಿಸಿದ್ದ ಎಚ್‌ಆರ್‌ಎಸ್‌ಎಂ ಪದವಿ ಕಾಲೇಜು ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಉದ್ಘಾಟಿಸಿದರು. ಗಂಗಾವತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎ.ಸೋಮರಾಜು, ಖಜಾಂಚಿ ಬದರಿ ನಾರಾಯಣ ಶ್ರೇಷ್ಠಿ, ಸದಸ್ಯ ಜೋಗದ ಹನುಮಂತಪ್ಪ ನಾಯಕ ಇತರರಿದ್ದರು. 
ಕೊಪ್ಪಳ

ವಿದ್ಯಾರ್ಥಿಗಳು ಉನ್ನತ ಸಾಧನೆಯ ಗುರಿ ಹೊಂದಲಿ

ಪ್ರಮುಖ ಮುಖ್ಯಾಂಶಗಳು

  • ಉನ್ನತ
  • ಸಾಧನೆ
  • ವಿದ್ಯಾರ್ಥಿಗಳು
ಗಂಗಾವತಿ: ಅಧ್ಯಯನ ಮತ್ತು ವಿಧೇಯ ರೂಢಿಸಿಕೊಳ್ಳುವ ಮೂಲಕ ನಿರೀಕ್ಷಿತ ಗುರಿ ಸಾಧಿಸುವಂತೆ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.
ಗಂಗಾವತಿ ಐಎಂಎ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಎಚ್‌ಆರ್‌ಎಸ್‌ಎಂ ಪದವಿ ಕಾಲೇಜಿನ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಸಾಧನೆಯತ್ತ ವಿದ್ಯಾರ್ಥಿಗಳು ಕೇದ್ರಿಕರಿಸಬೇಕಿದೆ ಎಂದರು.
ಎಸ್‌ಕೆಆರ್ ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಾನಂದ ಮೇಟಿ ಮಾತನಾಡಿ, ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಉನ್ನತ ಸಾಧನೆಗೆ ವೇದಿಕೆಯಾಗಿದ್ದು, ಮಾರ್ಗದರ್ಶಕರ ಸಲಹೆಗಳನ್ನು ಸಕಾರಾತ್ಮಕ ರೀತಿಯಲ್ಲಿ ಸ್ವೀಕರಿಸುವಂತೆ ಸಲಹೆ ನೀಡಿದರು.
ಗಂಗಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎ.ಸೋಮರಾಜು, ಖಜಾಂಚಿ ಬದರಿ ನಾರಾಯಣ ಶ್ರೇಷ್ಠಿ, ಸದಸ್ಯ ಜೋಗದ ಹನುಮಂತಪ್ಪ ನಾಯಕ, ಪ್ರಾಚಾರ್ಯ ಡಾ.ವಿಜಯಾನಂದ ವಗ್ಗೆ ಇತರರಿದ್ದರು.