ಗಂಗಾವತಿ ಬಿಇಒ ಕಚೇರಿ ಮುಂದೆ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಕಚೇರಿ ವ್ಯವಸ್ಥಾಪಕ ಶಿವಪ್ರಸಾದಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ, ಪದಾಧಿಕಾರಿಗಳಾದ ಚಂದ್ರು ನಿಸರ್ಗ, ರಾಘವೇಂದ್ರ ಕಡೆಬಾಗಿಲು ಇತರರಿದ್ದರು. 
ಕೊಪ್ಪಳ

ಶಾಲೆ ವೀಲಿನ ಬಿಟ್ಟು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ

ಶಾಲೆ ವೀಲಿನ ಬಿಟ್ಟು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಿ

ಗಂಗಾವತಿ: ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾಂದೋಲನಕ್ಕೆ ಪೂರಕ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಕಚೇರಿ ವ್ಯವಸ್ಥಾಪಕ ಶಿವಪ್ರಸಾದಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಶಾಲೆ ಆರಂಭಕ್ಕೆ ಮುನ್ನವೇ ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯ ಮತ್ತು ಮೀಸಲು ಬಗ್ಗೆ ಪ್ರಚುರ ಪಡಿಸಬೇಕಿದೆ. ಶಾಲೆಯಲ್ಲಿ ಅಧ್ಯಯನ ಮಾಡಿದ ಸಾಧಕರನ್ನು ಪ್ರೇರಣೆಯನ್ನಾಗಿಟ್ಟುಕೊಂಡು ಪ್ರಚಾರ ಕೈಗೊಳ್ಳಬೇಕು.
ಗ್ರಾಪಂಗೊಂದು ವಸತಿ ಶಾಲೆ ಆರಂಭಿಸುದರ ಜತೆ ಶಿಕ್ಷಕರಿಗೆ ಮುಕ್ತವಾಗಿ ಪಾಠ ಮಾಡಲು ಬಿಡಬೇಕು. ಗಣತಿ, ಮತಪಟ್ಟಿ ಪರಿಷ್ಕರಣೆ, ಬಿಸಿಯೂಟ ಯೋಜನೆಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು. ಸರ್ಕಾರ ಜಾರಿಗೊಳಿಸಿರುವ ಶ್ವಾನ ನೋಡಲ್ ಅಧಿಕಾರಿ ಸ್ಥಾನವನ್ನು ಶಿಕ್ಷಕರಿಗೆ ನೀಡಬಾರದು. ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ, ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗೆ ಪ್ರವೇಶ ನೀಡಬೇಕು.
ಶಾಲೆ ಮುಚ್ಚುವುದು ಮತ್ತು ವಿಲೀನ ಬದಲು ಅಲ್ಲಿನ ಸ್ಥಿತಿಗತಿ ಅರಿತು ಸ್ಥಳೀಯರ ಸಹಕಾರದಿಂದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಶಿಕ್ಷಕ ಹುದ್ದೆ ಭರ್ತಿ, ಕೊಠಡಿಗಳ ದುರಸ್ತಿ ಜತೆಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಚಂದ್ರು ನಿಸರ್ಗ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ಮೇಘರಾಜ್, ಗಣೇಶ್, ಜಂಬಣ್ಣ ಇತರರಿದ್ದರು.