ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ 47ನೇ ಜನ್ಮದಿನವನ್ನು ಮಾಜಿ ಸೈನಿಕರ ಸಂಘದಿಂದ ಶಾಸಕರ ಸ್ವಗೃಹದಲ್ಲಿ ಕೇಕ್​ ಕತ್ತರಿಸುವ ಮೂಲಕ ಆಚರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಪದಾಧಿಕಾರಿಗಳಾದ ಶಿವಾನಂದ ಪೂಜಾರ, ವಾಸಪ್ಪ ಚೆಲ್ಲಾ, ಹೇಮಂತಪ್ಪ ಆರೇರ, ಬಸವರಾಜ ಮಠದ, ಇಂದುಧರ ಸೊಪ್ಪಿಮಠ, ಬಸಮ್ಮ ಕುರ್ಲಿ ಇದ್ದರು. 
ಕೊಪ್ಪಳ

ಮಾಜಿ ಸೈನಿಕರ ಸಂಘಕ್ಕೆ ಜಮೀನು ಮಂಜೂರು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಹಿಟ್ನಾಳಗೆ ಅಭಿನಂದನೆ
ಕೊಪ್ಪಳ : ಜಿಲ್ಲೆಯ ಮಾಜಿ ಸೈನಿಕರ ಬಹುದಿನದ ಬೇಡಿಕೆಯಾಗಿದ್ದ ಜಮೀನು ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಗರದ ಸಮೀಪದ ಚುಕನಕಲ್ಲ ಗ್ರಾಮದ ಸರ್ವೆ ನಂಬರ್​ 452ರಲ್ಲಿ ಎರಡು ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಈ ನಿಮಿತ್ತ ಮಾಜಿ ಸೈನಿಕರ ಸಂಘದ ವತಿಯಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಅಭಿನಂದಿಸಲಾಯಿತು.
ಮಂಜೂರಾದ ಈ ಜಾಗದಲ್ಲಿ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಜಿಲ್ಲಾ ಮಾಜಿ ಸೈನಿಕರ ಮತ್ತು ಉಪನಿರ್ದೇಶಕರ ಕಾರ್ಯಾಲಯ. ಸಿ.ಎಸ್​.ಡಿ ಕ್ಯಾಂಟೀನ್​ ಸೌಲಭ್ಯ. ಮಾಜಿ ಸೈನಿಕರಿಗಾಗಿ ಪ್ರತ್ಯೇಕ ಆಸ್ಪತ್ರೆ ಹಾಗೂ ಇತರೆ ಸಾಂಸತಿಕ ಚಟುವಟಿಕೆಗಳ ಕೇಂದ್ರವನ್ನು ನಿರ್ಮಿಸಲಾಗುವುದು.
ಸಂಘದ ಅಧ್ಯಕ್ಷ ಮಾರುತಿ ಗೊಂದಿ ಮಾತನಾಡಿ, ಜಮೀನು ಮಂಜೂರಾತಿಗೆ ಸಹಕರಿಸಿದ ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಸುರೇಶ್​ ಹಿಟ್ನಾಳ, ಸಹಾಯಕ ಆಯುಕ್ತ ಕ್ಯಾಪ್ಟನ್​ ಮಹೇಶ್​ ಮಾಲಗಿತ್ತಿ ಹಾಗೂ ತಸೀಲ್ದಾರ್​ ವಿಠ್ಠಲ ಚೌಗಲೆ ಅವರ ಶ್ರಮವನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಈ ಕಟ್ಟಡಗಳ ನಿಮಾರ್ಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ 47ನೇ ಜನ್ಮದಿನವನ್ನು ಮಾಜಿ ಸೈನಿಕರ ಸಂಘದಿಂದ ಶಾಸಕರ ಸ್ವಗೃಹದಲ್ಲಿ ಕೇಕ್​ ಕತ್ತರಿಸುವ ಮೂಲಕ ಆಚರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಪದಾಧಿಕಾರಿಗಳಾದ ಶಿವಾನಂದ ಪೂಜಾರ, ವಾಸಪ್ಪ ಚೆಲ್ಲಾ, ಹೇಮಂತಪ್ಪ ಆರೇರ, ಬಸವರಾಜ ಮಠದ, ಇಂದುಧರ ಸೊಪ್ಪಿಮಠ, ಬಸಮ್ಮ ಕುರ್ಲಿ, ಜಯಶ್ರೀ ಚನ್ನಳ್ಳಿ ಹಾಗೂ ಸರ್ವ ಸದಸ್ಯರು, ಮಾಜಿ ಸೈನಿಕರ ಸಂಘದ ಮಹಿಳೆಯರು ಇದ್ದರು.