ಕೊಪ್ಪಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಪ್ರಭಾರ ಅಧ್ಯಕ್ಷ ಎನ್.ಎಸ್.ಪಾಟೀಲ್ ಉದ್ಘಾಟಿಸಿದರು. ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ, ನ್ಯಾಯಾಧೀಶ ಮಹಾಂತೇಶ ದರಗದ, ಡಿಸಿ ಡಾ.ಸುರೇಶ ಬಿ.ಇಟ್ನಾಳ ಇದ್ದರು. 
ಕೊಪ್ಪಳ

ಭೂಕಬಳಿಕೆ ನಿಷೇಧ ಕಾಯ್ದೆ ಅರಿಯಲಿ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತ ಕಾರ್ಯಾಗಾರ
  • ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಪ್ರಭಾರ ಅಧ್ಯಕ್ಷ ಎನ್.ಎಸ್.ಪಾಟೀಲ್
ಕೊಪ್ಪಳ: ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ತಿಳಿಸಲು ಕಾರ್ಯಾಗಾರ ಹಮ್ಮಿಕೊಂಡಿದ್ದು ಅಧಿಕಾರಿಗಳು ಸದುಪಯೋಗ ಪಡೆಯ ಬೇಕೆಂದು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಪ್ರಭಾರ ಅಧ್ಯಕ್ಷ ಎನ್.ಎಸ್.ಪಾಟೀಲ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಭೂಮಿ ರಕ್ಷಿಸಬೇಕು. ಕಬಳಿಕೆ ಆಗದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಒತ್ತುವರಿ ಆಗಿದ್ದರೆ ಪ್ರಕರಣ ದಾಖಲಿಸುವ ಬಗೆ, ಮುಂದಿನ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುವುದು. ಭೂಕಬಳಿಕೆ ನಿಷೇಧ ಕಾನೂನು ಬಗ್ಗೆ ನಿಮಗೆ ಸ್ಪಷ್ಟ ಅರಿವಿರಬೇಕು. 2016 ರಿಂದ ಈವರೆಗೆ 23,849 ಪ್ರಕರಣಗಳನ್ನು ತಿದ್ದುಪಡಿ ಆಧಾರದ ಮೇಲೆ ಇತ್ಯರ್ಥಪಡಿಸಲಾಗಿದೆ. 4,786 ಪ್ರಕರಣಗಳು ಬಾಕಿ ಇವೆ. 4,585 ಎಕರೆ 6 ಗುಂಟೆ ಸರ್ಕಾರಿ ಜಮೀನು ಒತ್ತುವರಿ ತೆರವಾಗಿದೆ. 133 ಜನರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ಮಾತನಾಡಿ, ಭೂ ಕಬಳಿಕೆ, ಅದರ ವ್ಯಾಖ್ಯಾನ ಸಾರ್ವಜನಿಕರಲ್ಲಿ ಸೀಮಿತವಾಗಿದೆ. ಕೆರೆ, ಅರಣ್ಯ, ನದಿ ಒತ್ತುವರಿಯೂ ಆಗಿದೆ. ಭೂ ಕಬಳಿಕೆಯಾದ ನಂತರ ಯಾವ ಕ್ರಮ ತೆಗೆದುಕೊಳ್ಳುಬೇಕು. ಭೂ ಕಬಳಿಕೆಯಾದರೆ ಶಿಕ್ಷೆ ವಿಧಿಸುವ ಮತ್ತು ಅದನ್ನು ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ಭೂ ಕಬಳಿಕೆ ಚಟುವಟಿಕೆ ನಿಷೇಧ ಹಾಗೂ ಭಾದಿತರನ್ನು ರಕ್ಷಿಸಿ ಮರಳಿ ಅವರಿಗೆ ನೀಡುವುದು ಮತ್ತು ಅಕ್ರಮ ಸಂಪತ್ತಿನ ಸಂಗ್ರಹ ತಡೆಯುವುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ವಾತನಾಡಿ, ಸರ್ಕಾರಿ ಜಮೀನು, ಮುಜರಾಯಿ, ವಕ್ಫ್ ಆಸ್ತಿಗೂ ಕಾಯ್ದೆ ಅನ್ವಯ ಆಗಲಿದೆ. ಅಧಿಕಾರಿಗಳು ಕಾರ್ಯಾಗಾರದ ಸದುಪಯೋಗ ಪಡೆಯಿರಿ. ಭೂಮಿ ತಂತ್ರಾಂಶದಲ್ಲಿ ದಾಖಲೆ ಅಪ್‌ಲೋಡ್ ವಾಡುವಾಗ ಬಹಳಷ್ಟು ಲೋಪಗಳು ಕಂಡು ಬರುತ್ತಿವೆ. ಅವುಗಳನ್ನು ಸರಿಪಡಿಸುವ ಕೆಲಸ ವಾಡುತ್ತಿದ್ದೇವೆ. ಭೂ ಸುರಕ್ಷಾದಲ್ಲಿ ಈಗಾಗಲೇ ಕಾರಟಗಿ, ಕನಕಗಿರಿ ಮತ್ತು ಯಲಬುರ್ಗಾ ತಾಲೂಕಿನ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ ‘ಕೆರೆ ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆ’ ಕುರಿತು ಹಾಗೂ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿ ಎಚ್.ಕೆ.ನವೀನ್ ‘ಸ್ಥಳೀಯ ಸಂಸ್ಥೆಗಳು, ಅರಣ್ಯ, ಮುಜರಾಯಿ, ವಕ್ಫ್ ಆಸ್ತಿಗಳು ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆಗಳ ಕುರಿತು ಉಪನ್ಯಾಸ ನೀಡಿದರು.
ನ್ಯಾಯಾಧೀಶರಾದ ಡಿ.ಕೆ. ಕುವಾರ, ಸರಸ್ವತಿದೇವಿ, ಮಲಕರಿ ರಾಮಪ್ಪ ಒಡಿಯರ್, ಭಾಗ್ಯಲಕ್ಷ್ಮೀ, 
ತ್ರಿವೇಣಿ ಈಳಿಗೇರ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಡಿಎ್ಒ ನಿರ್ಮಲಾ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ವಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಇತರರಿದ್ದರು.
"

ವಕ್ಫ್ ಅಥವಾ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ವಾದಾಯ ದತ್ತಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ, ಅಥವಾ ಸರ್ಕಾರದ ಒಡೆತನದಲ್ಲಿರುವ ಹಾಗೂ ನಿಯಂತ್ರಣದಲ್ಲಿರುವ ಅಥವಾ ವ್ಯವಸ್ಥಾಪನೆಯಲ್ಲಿರುವ ಶಾಸನಬದ್ಧ ಅಥವಾ ಶಾಸನಬದ್ಧವಲ್ಲದ ಸಂಸ್ಥೆಗಳಿಗೆ ಸೇರಿದ ಭೂಮಿಗಳನ್ನು ಕಬಳಿಸಲು ವಾಡಲಾಗುವ ಸಂಟಿತ ಪ್ರಯತ್ನ ಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಲು ಕಾನೂನು ಜಾರಿಯಾಗಿದೆ.

"

ಯಾವೊಬ್ಬ ವ್ಯಕ್ತಿ, ಸರ್ಕಾರಿ ಸ್ವತ್ತನ್ನು ಅಕ್ರಮವಾಗಿ ಪಡೆದು, ಸರ್ಕಾರದೆಂದು ಗೊತ್ತಿದ್ದು ಅದನ್ನು ಹೊಂದುವಂತಿಲ್ಲ. ಸರ್ಕಾರಿ ಸ್ವತ್ತನ್ನು ವಾರಾಟ ವಾಡಲು, ಆಡವಾನ ವಾಡಲು ಮತ್ತು ದಾನದ ಮೂಲಕ ಹಸ್ತಾಂತರಿಸಲು ದಸ್ತಾವೇಜುಗಳನ್ನು ಸೃಷ್ಟಿಸಿ ವಂಚಿಸಿದರೆ ಗರಿಷ್ಠ ಮೂರು ವರ್ಷ ಸೆರೆವಾಸ 10 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ.