ಅಪಘಾತ ಪ್ರಕರಣವೊಂದರಲ್ಲಿ ಮೃತ ಕುಟುಂಬಕ್ಕೆ ಸಕಾಲಕ್ಕೆ ಪರಿಹಾರ ನೀಡದ ಕೆಕೆಆರ್‌ಟಿಸಿ ಹೊಸಪೇಟೆಯ ಡಿಪೋ ಬಸ್‌ನ್ನು ಗಂಗಾವತಿ ಬಸ್ ನಿಲ್ದಾಣದಲ್ಲಿ ಗುರುವಾರ ಜಪ್ತಿ ಮಾಡಲಾಯಿತು. ಕೋರ್ಟ್ ಬೇಲ್ಿಗಳಾದ ಮಹ್ಮದ್ ಉಸ್ಮಾನ್, ರಮೇಶ, ವೀರೇಶ, ಕಕ್ಷಿದಾರರ ಪರ ವಕೀಲರಾದ ಮಲ್ಲಿಕಾರ್ಜುನ ಜಾಜಿ, ಮಂಜುನಾಥ ಭೇರಿಗೆ ಇದ್ದರು.
ಗಂಗಾವತಿ: ಅಪಘಾತ ಪ್ರಕರಣವೊಂದರಲ್ಲಿ ಮೃತ ಕುಟುಂಬಕ್ಕೆ ಸಕಾಲಕ್ಕೆ ಪರಿಹಾರ ನೀಡದ ಕೆಕೆಆರ್‌ಟಿಸಿ ಹೊಸಪೇಟೆಯ ಡಿಪೋ ಬಸ್‌ನ್ನು ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ಜಪ್ತಿ ಮಾಡಲಾಯಿತು.
2019ರ ನ.28ರಂದು ತಾಲೂಕಿನ ಸಂಗಾಪುರ ಬಳಿ ಗಂಗಾವತಿಯಿಂದ ಹೊಸಪೇಟೆಗೆ ತೆರಳುತ್ತಿದ್ದ ಕೆಕೆಆರ್‌ಟಿಸ್ ಬಸ್ ಅಪಘಾತದಲ್ಲಿ ಮಹ್ಮದ್ ಸಲಾವುದ್ದೀನ್ ಅಯೂಬಿ ಮತ್ತು ನಿಖಿತಾಬೇಗಂ ಎಂಬುವರು ಮೃತಪಟ್ಟಿದ್ದು, ಪರಿಹಾರಕ್ಕಾಗಿ ಮೃತ ಕುಟುಂಬ ಸದಸ್ಯೆ ದಿಶಾನ್ ನಸ್ರೀನ್ ಕೋರ್ಟ್ ಮೆಟ್ಟಿಲೇರಿದ್ದರು. ಮೃತ ಕುಟುಂಬಕ್ಕೆ 55.57ಕ್ಷ ರೂ. ಪರಿಹಾರ ನೀಡುವಂತೆ 2021ರಲ್ಲಿ ಕೋರ್ಟ್ ಆದೇಶಿಸಿತ್ತು. ಆದರೆ ಕೆಕೆಆರ್‌ಟಿಸಿ ಅಧಿಕಾರಿಗಳು ಕೋರ್ಟ್ ಆದೇಶ ನಿರ್ಲಕ್ಷಿಸಿದ್ದರಿಂದ ಕಕ್ಷಿದಾರರು ಪುನಃ ಮೇಲ್ಮನವಿ ಸಲ್ಲಿಸಿದರು.
ಇಲ್ಲಿನ ಜೆಎಂಎ್ಸಿ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ ಪರಿಹಾರದ ಜತೆಗೆ 2025ರ ನ.25ರವರೆಗೆ ಶೇ.6 ಬಡ್ಡಿ ಮತ್ತು ಇತರ ವೆಚ್ಚ ಸೇರಿ 71.33 ಲಕ್ಷ ರೂ. ಪಾವತಿಸುವಂತೆ ಸೂಚಿಸಿತ್ತಲ್ಲದೇ, ಪರಿಹಾರಕ್ಕಾಗಿ ಬಸ್ ಜಪ್ತಿಗೆ ಆದೇಶಿಸಿದ್ದರು. ಅದರಂತೆ ನಗರದ ಕೆಕೆಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಹೊಸಪೇಟೆ ಡಿಪೋ ಬಸ್‌ನ್ನು ಕೋರ್ಟ್ ಬೇಲ್ಿಗಳಾದ ಮಹ್ಮದ್ ಉಸ್ಮಾನ್, ರಮೇಶ, ವೀರೇಶ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು. ಕಕ್ಷಿದಾರರ ಪರ ವಕೀಲರಾದ ಮಲ್ಲಿಕಾರ್ಜುನ ಜಾಜಿ, ಮಂಜುನಾಥ ಭೇರಿಗೆ ಇದ್ದರು.