ಎಂ.ಗುಡದೂರಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಉದ್ಘಾಟಿಸಿದರು. ವಿಪ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಪೂರು, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಇತರರಿದ್ದರು. 
ಕೊಪ್ಪಳ

2ಎ ಮೀಸಲು ಸಿಗುವವರೆಗೂ ಹೋರಾಟ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
  • ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ-ಪುತ್ಥಳಿ ಅನಾವರಣ
ಕುಷ್ಟಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ದೊರೆಯುವವರೆಗೂ ಹೋರಾಟ ಮಾಡಲಾಗವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ತಾಲೂಕಿನ ಎಂ.ಗುಡದೂರು ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ಹಾಗೂ ಪುತ್ಥಳಿ ಅನಾವರಣಗೊಳಿಸಿ ಬುಧವಾರ ಮಾತನಾಡಿದರು. ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ವಿಷಯದಲ್ಲಿ ನಾಟಕ ಕಂಪನಿ ಶುರುವಾಗಿದೆ. ಸಮಾಜಕ್ಕೆ ಶ್ರಮಿಸದೇ ಕೆಲವರು ಐಪಿಎಲ್ ನೋಡಲು ಟಿಕೆಟ್ ಕೇಳಿದ್ದಾರೆ. ಪಂಚಮಸಾಲಿಗಳನ್ನು ವೋಟಿಗಾಗಿ ಮಾತ್ರ ಬಳಸಿಕೊಳ್ಳಲಾಗಿದೆ. ಬರುವ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಸತ್ಯ. ಸಮಾಜಕ್ಕೆ ಯಾವತ್ತೂ ಒಳ್ಳೆಯದು ಬಯಸುವೆ. 2ಗೆ ಸೇರಿಸಿ ಕೇಂದ್ರ ಸರ್ಕಾರದ ಶಿಫಾರಸಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ವಿಪ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಪಂಚಮಸಾಲಿ ಸಮಾಜದವರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಮುದಾಯದ ಒಳಿತಿಗೆ ಶ್ರಮಿಸುವ ಕೆಲಸವಾಗಲಿ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಅಧ್ಯಕ್ಷತೆ ವಹಿಸಿದ್ದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟೆಂಗುಂಟಿ ಭೀಮಪ್ಪಯ್ಯ ಗ್ಯಾನಪ್ಪಯ್ಯ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಪೂರು, ಜಿಪಂ ಮಾಜಿ ಕೆ.ಮಹೇಶ್, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ನ್ಯಾಯವಾದಿ ಬಿ.ಎಸ್. ಪಾಟೀಲ್, ಲಿಂಗಾಯತ ವೀರಶೈವ ಪಂಚಮಸಾಲಿ ಸಮುದಾಯದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಮುಖಂಡರಾದ ಬಸವರಾಜ ಕ್ಯಾವಟರ್, ಚಂದ್ರಶೇಖರ್ ನಾಲತ್ವಾಡ್, ಮಲ್ಲಣ್ಣ ಪಲ್ಲೇದ್, ಸಂಗನಗೌಡ ಜೈನರ್, ಬಸವರಾಜ ಹಳ್ಳೂರು, ಉಮೇಶ ಮಂಗಳೂರು, ಸಂಗಪ್ಪ ಬಿಜಕಲ್, ಸಂಗನಗೌಡ, ಅಶೋಕ ಬಳೂಟಗಿ, ಸಿಪಿಐ ವಿಶ್ವನಾಥ ಹಿರೇಗೌಡ್ರ, ಪಿಎಸೈ ಚಂದ್ರಪ್ಪ ಎಚ್. ಇತರರಿದ್ದರು.