ಅಳವಂಡಿ ಸಮೀಪದ ತಿಗರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಪ್ರಮುಖರಾದ ವೆಂಕಟೇಶ, ಮಲ್ಲೇಶಪ್ಪ, ಮಹೇಶ, ಮಲ್ಲಿಕಾರ್ಜುನ ಇತರರಿದ್ದರು.
ಕಾಯಕ ತತ್ವ ಪ್ರತಿಪಾದಕ
ಅಳವಂಡಿ: ಶರಣ ಅಂಬಿಗರ ಚೌಡಯ್ಯ ಅವರು 12ನೇ ಶತಮಾನದಲ್ಲಿ ನೇರ, ನಿಷ್ಠೂರ ವಚನಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದಾರೆ ಎಂದು ಶಿಕ್ಷಕ ಮಲ್ಲಿಕಾರ್ಜುನ ಯತ್ನಳ್ಳಿ ಹೇಳಿದರು.
ಸಮೀಪದ ತಿಗರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೋಕದ ಹಿತಕ್ಕಾಗಿ ಸಮಾಜದ ಅನಿಷ್ಟ ಪದ್ಧತಿಗಳನ್ನು, ಜಾತಿ ವ್ಯವಸ್ಥೆ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಲು ವಚನಗಳ ಮೂಲಕ ಅರಿವು ಮೂಡಿಸಿದರು ಎಂದರು.
ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ ಕವಲೂರ, ಸದಸ್ಯರಾದ ಮಲ್ಲೇಶಪ್ಪ ಅಂಬಿಗೇರ, ಮಹೇಶ ಸಿಗನಹಳ್ಳಿ, ನೀಲಕಂಠಪ್ಪ, ಶಿಕ್ಷಕರಾದ ನಾಗರಾಜ ನವಲಿ, ಸಿದ್ದಪ್ಪ ಸಿಗ್ಗಾವಿ, ಯಮನೂರಸಾಬ, ರೂಪಾ ಪಾತ್ರದ, ಉಮಾ, ಕವಿತಾ, ಭಾರತಿ, ಅನಿತಾ, ಶಶಿಕಲಾ ಇದ್ದರು.
ಹಟ್ಟಿ: ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಸಾಹಿತಿ, ಶಿಕ್ಷಕ ಯಲ್ಲಪ್ಪ ಹರ್ನಾಳಗಿ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ವಚನಗಳನ್ನು ಓದಿ ಸಾರ ಅರಿತು ಬದುಕು ರೂಪಿಸಿಕೊಳ್ಳಿ ಎಂದರು.
ಮುಖ್ಯಶಿಕ್ಷಕಿ ಸಾವಿತ್ರಿ ಉಂಕಿ, ಶಿಕ್ಷಕರಾದ ಜಡಿಯಪ್ಪ ಇಡಗಲ್, ಚನ್ನಪ್ಪ ಕುರಿಗಾರ, ರೂಪಾ ಸೀಮಿಕೇರಿ, ರೇಖಾ ಮೇಟಿ, ಮಾರುತಿ ಚಿಲವಾಡಗಿ, ಲೋಹಿತ, ಶಿಲ್ಪಾ ಹಳ್ಳಿ ಇತರರಿದ್ದರು.