ಗಂಗಾವತಿ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಮಂಗಳವಾರ ಉದ್ಘಾಟಿಸಿದರು. ಡೆಲ್ಲಿ ಪಬ್ಲಿಕ್ ಸ್ಕೂಲ್ ನಿರ್ದೇಶಕ ನಾಗರಾಜ ಕೇಸರಹಟ್ಟಿ, ಕರಾಟೆ ತರಬೇತುದಾರರಾದ ಡಾ. ಸಿಹಾನ್ ಜಬಿವುಲ್ಲಾ, ಸೈಯದ್ ಬಿಲಾಲ್ ಇತರರಿದ್ದರು. 
ಕೊಪ್ಪಳ

ಆತ್ಮರಕ್ಷಣೆ ಕಲೆಗೆ ಪ್ರೋತ್ಸಾಹ ಮುಖ್ಯ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಹೇಳಿಕೆ
ಗಂಗಾವತಿ: ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕರಾಟೆ ಕಲೆಗೆ ಪ್ರೋತ್ಸಾಹ ಮುಖ್ಯವಾಗಿದ್ದು, ಶಾಲೆ-ಕಾಲೇಜುಗಳಲ್ಲಿ ಕಡ್ಡಾಯಗೊಳಿಸಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಸಲಹೆ ನೀಡಿದರು.
ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್‌ಶಿಪ್ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಕರಾಟೆ ತರಬೇತಿ ಅಗತ್ಯವಾಗಿದ್ದು, ಕರಾಟೆ ಕಲಿಕೆಯಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದರು.
ಡೆಲ್ಲಿ ಪಬ್ಲಿಕ್ ಸ್ಕೂಲ್ ನಿರ್ದೇಶಕ ನಾಗರಾಜ ಕೇಸರಹಟ್ಟಿ ಮಾತನಾಡಿ, ಮೂರು ರಾಷ್ಟ್ರಗಳ ಪ್ರತಿನಿಧಿಗಳು ಏಕಕಾಲಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಅಪರೂಪವಾಗಿದ್ದು, ವಿಶ್ವಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಆಯೋಜಿಸುವಂತಾಗಲಿ ಎಂದರು.
ಪ್ರಾಚಾರ್ಯ ರಾಮರಾಜ ಪಟ್ವಾರಿ, ಕರಾಟೆ ಸಂಘದ ಪದಾಧಿಕಾರಿಗಳಾದ ಕಟ್ಟೆಸ್ವಾಮಿ, ಮೌನೇಶ, ಕೆ.ಪಿ.ಜೋಶಿ, ಮನೋಜಕುಮಾರ, ಮುಕ್ತಿ ಕಾಲೆ, ಜಮುನಾರಾಯ್, ಸಂತೋಷ್‌ರಾಯ್, ಡಾ. ಸಿಹಾನ್ ಜಬಿವುಲ್ಲಾ, ಸೈಯದ್ ಬಿಲಾಲ್, ಮಂಜುಳಾ ಕುಮಾರಿ, ಸೌಮ್ಯಾ ಇತರರಿದ್ದರು. ಸ್ಪರ್ಧೆಯಲ್ಲಿ ಭಾರತ, ನೇಪಾಳ, ಶ್ರೀಲಂಕಾದಿಂದ 500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.