ಕನಕಗಿರಿಯಲ್ಲಿ ಶಿರಸ್ತೇದಾರ್ ಅನಿತಾ ಇಂಡಿಗೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳಿಂದ ಮನವಿ ಸಲ್ಲಿಸ ಲಾಯಿತು. ಪ್ರಮುಖ ರಾದ ಲಿಂಗಪ್ಪ ಪೂಜಾರಿ, ಶಿವಕುಮಾರ ಈಚನಾಳ, ಯಲ್ಲಪ್ಪ ಕಟ್ಟಿಮನಿ, ನಾಗೇಶ್ ಬಡಿಗೇರ ಇತರರಿದ್ದರು.
- ಡಿವೈಎಸ್ಪಿ, ಶಿರಸ್ತೇದಾರ್‌ಗೆ ದಲಿತ-ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ
ಕನಕಗಿರಿ: ಬಸವರಾಜರೆಡ್ಡಿ ಆತ್ಮಹತ್ಯೆ ಪ್ರಕರಣದಲ್ಲಿ ಪಿಐ ವಿ. ನಾರಾಯಣ ಅಮಾನತು ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ತಹಸಿಲ್ ಕಚೇರಿಯ ಶಿರಸ್ತೇದಾರ್ ಅನಿತಾ ಇಂಡಿ ಹಾಗೂ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡಗೆ ಮನವಿ ಸಲ್ಲಿಸಲಾಯಿತು.
ಗ್ಯಾರಂಟಿ ಸಮಿತಿ ಸದಸ್ಯ ನೀಲಕಂಠ ಬಡಿಗೇರ ಮಾತನಾಡಿ, ಪಿಐ ವಿ.ನಾರಾಯಣ ಅವರು ಪ್ರಾಮಾಣಿಕ, ನಿಷ್ಠಾವಂತ ಹಾಗೂ ಜನಪರ ಅಧಿಕಾರಿಯಾಗಿ ಕೆಲಸ ಮಾಡುವ ಮೂಲಕ ಜನ ಮೆಚ್ಚುಗೆ ಪಡೆದಿದ್ದರು. ಎರಡು ಕೊಲೆ ಪ್ರಕರಣಗಳನ್ನು ಕೆಲವೇ ಗಂಟೆಗಳಲ್ಲಿ ಭೇದಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಅನೇಕ ಕುರಿಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ. ಜಾಗ ಒತ್ತುವರಿ, ದೌರ್ಜನ್ಯವಾಗಿದೆಯೆಂದು ಬಸವರಾಜರೆಡ್ಡಿ ದೂರು ಸಲ್ಲಿಸಲು ಬಂದಾಗ ಪಿಐ ಅವರು ಗಂಗಾವತಿಯಲ್ಲಿ ಬಂದೋಬಸ್ತ್‌ಗೆ ತೆರಳಿದ್ದರು.
ಆ.15ರಂದು ಬಸವರಾಜ ರೆಡ್ಡಿ ಆತ್ಮಹತ್ಯೆಗೆ ಮುಂದಾಗಿ ಆ.16ರಂದು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದ್ದಾರೆ. ಆದಾಗ್ಯೂ ಪಿಐ ನಾರಾಯಣರನ್ನು ಅಮಾನತು ಮಾಡಿರುವುದು ಸರಿಯಲ್ಲ. ಆದ್ದರಿಂದ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪಪಂ ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಪಪಂ ಸದಸ್ಯ ಹನುಮಂತ ಬಸರಿಗಿಡದ, ನಾಮನಿರ್ದೇಶಿತ ಸದಸ್ಯ ಶಾಂತಪ್ಪ ಬಸರಿಗಿಡದ, ಪ್ರಮುಖರಾದ ಕಂಟೆಪ್ಪ ಮ್ಯಾಗಡೆ, ಲಿಂಗಪ್ಪ ಪೂಜಾರಿ, ಶಿವಕುಮಾರ ಈಚನಾಳ, ಯಲ್ಲಪ್ಪ ಕಟ್ಟಿಮನಿ, ದೌರ್ಜನ್ಯ ಕಮಿಟಿ ಜಿಲ್ಲಾ ಸದಸ್ಯ ನಾಗೇಶ್ ಬಡಿಗೇರ, ಸುಭಾಷ್ ಕಂದಕೂರು, ಉಮೇಶ್ ಮ್ಯಾಗಡೆ, ಮಂಜುನಾಥ ಮ್ಯಾಗಡೆ, ಕನಕಪ್ಪ ಮ್ಯಾಗಡೆ, ಹನುಮೇಶ ಮ್ಯಾಗಡೆ, ಶಶಿ ಕೋರಿ, ತಿಮ್ಮಣ್ಣ ಬಡಿಗೇರ್, ಸುರೇಶ್ ಕುರುಗೋಡು, ಅಣ್ಣಪ್ಪ ಭಜಂತ್ರಿ, ದುರ್ಗಪ್ಪ, ದುರ್ಗಪ್ಪ ದೊಡ್ಡಮನಿ, ಮಂಜುನಾಥ್ ಬಡಿಗೇರ, ತಿಮ್ಮಣ್ಣ ದಾಸರ, ಉಮೇಶ್ ಸೋಮಸಾಗರ, ಹನುಮೇಶ ಜವಳಗೇರಿ, ಹುಲುಗಪ್ಪ ಜವಳಗೇರಿ ಹಾಗೂ ವಿದ್ಯಾರ್ಥಿಗಳಿದ್ದರು.