ಕೊಪ್ಪಳ ಡಿಸಿ ಕಚೇರಿಯಲ್ಲಿ ಮಂಗಳವಾರ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿ ಆಚರಿಸಲಾಯಿತು. ಎಡಿಸಿ ಸಿದ್ರಾಮೇಶ್ವರ, ಜಿಲ್ಲಾ ಚುನಾವಣಾ ಶಾಖೆ ತಹಸೀಲ್ದಾರ ರವಿಕುವಾರ ವಸ್ತ್ರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ಕರ್ಣಕುವಾರ, ವಾರ್ತಾ ಇಲಾಖೆ ಸಹಾಯಕ ನಿದೇಶಕ, ಡಾ. ಸುರೇಶ ಜಿ.,ಕೆ.ಶ್ರೀನಿವಾಸ ಕಟ್ಟಿಮನಿ, ನಾಗರಾಜ ಕನಕಗಿರಿ, ಗಿರೀಶ್ ಕನಕಗಿರಿ, ಅಶೋಕ ಉಣಿಸಿಗಿಡ, ವಿನಯ ಕಟ್ಟಿಮನಿ, ತಿಪ್ಪಯ್ಯ ನಾಯ್ಡು ಎನ್. ಇತರರಿದ್ದರು.
- ಎಡಿಸಿ ಸಿದ್ರಾಮೇಶ್ವರ ಅಭಿಮತ
- ವಿವಿಧೆಡೆ ಕೈವಾರ ತಾತಯ್ಯ ಜಯಂತಿ ಆಚರಣೆ
ಕೊಪ್ಪಳ: ಜಿಲ್ಲಾಡಳಿತದಿಂದ ಮಹಾನ್ ಸಂತ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸಮುದಾಯದ ಪ್ರಮುಖರೊಂದಿಗೆ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ)ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಕೈವಾರ ತಾತಯ್ಯ, ಕಾಲಜ್ಞಾನಿಯಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಭಕ್ತಿ ಗೀತೆ, ತತ್ವಪದಗಳು ಹಾಗೂ ಭವಿಷ್ಯವಾಣಿಗಳನ್ನು ರಚಿಸಿದ್ದಾರೆ. ಸಮಾಜಕ್ಕೆ ಭಕ್ತಿ ಮತ್ತು ಮಾನವೀಯತೆ ಬೋಧಿಸಿ ಪವಾಡ ಪುರುಷ ಎಂದರು.
ಜಿಲ್ಲಾ ಚುನಾವಣಾ ಶಾಖೆಯ ತಹಸೀಲ್ದಾರ್ ರವಿಕುವಾರ ವಸ್ತ್ರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುವಾರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ, ಡಾ. ಸುರೇಶ ಜಿ., ಬಲಿಜ ಸಮುದಾಯ ಮುಖಂಡರಾದ ಕೆ.ಶ್ರೀನಿವಾಸ ಕಟ್ಟಿಮನಿ, ನಾಗರಾಜ ಕನಕಗಿರಿ, ಗಿರೀಶ್ ಕನಕಗಿರಿ, ಅಶೋಕ ಉಣಿಸಿಗಿಡ, ವಿನಯ ಕಟ್ಟಿಮನಿ, ತಿಪ್ಪಯ್ಯ ನಾಯ್ಡು ಎನ್., ವರಲಕ್ಷ್ಮೀ ಚಿಂತಪಲ್ಲಿ, ಲತಾ, ಸುವರ್ಣ, ನಾಗರತ್ನಾ, ರೇಖಾ, ಸರೋಜಾ ಇತರರಿದ್ದರು.