ಕಾರಟಗಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಜಲ ಜಾಗೃತಿ, ಜನ ಜಾಗೃತಿ ರಥಯಾತ್ರೆಯ ಎಲ್.ಇ.ಡಿ. ವಾಹನಕ್ಕೆ ಸಚಿವ ಶಿವರಾಜ ತಂಗಡಗಿ ಸೋಮವಾರ ಚಾಲನೆ ನೀಡಿದರು. ಗ್ಯಾರಂಟಿ ಯೋಜನೆ ಸಮಿತಿಯ ಜಿಲ್ಲಾ ಸದಸ್ಯ ಸೋಮನಾಥ ದೊಡ್ಡಮನೆ, ತಾಲೂಕು ಅಧ್ಯಕ್ಷ ದೇವಪ್ಪ ಬಾವಿಕಟ್ಟಿ, ಅಭಿಯಾನದ ತಾಲೂಕು ಸಂಚಾಲಕ ಪ್ರಭು ಉಪನಾಳ ಇದ್ದರು. 
ಕೊಪ್ಪಳ

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಪಾದಯಾತ್ರೆಯಲ್ಲಿ
  • ಪಾಲ್ಗೊಳ್ಳಲು
  • ಮನವಿ
ಕಾರಟಗಿ: ಕೃಷಿ-ಉದ್ಯಮಕ್ಕೆ ನೀರು ಒದಗಿಸುತ್ತಾ ಕೋಟ್ಯಂತರ ಜೀವರಾಶಿಗೆ ಜೀವಸೆಲೆಯಾಗಿರುವ ತುಂಗಭದ್ರಾ ನದಿ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣಕ್ಕೆ ಡಿ. 28ರಂದು ಆಗಮಿಸಲಿರುವ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಕುರಿತು ಜಲ ಜಾಗೃತಿ ಹಾಗೂ ಜನ ಜಾಗೃತಿ ರಥಯಾತ್ರೆ ಪ್ರಚಾರದ ಎಲ್.ಇ.ಡಿ. ವಾಹನಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ನದಿಯನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾಪಿಟ್ಟುಕೊಂಡು ಹೋಗಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ನದಿಯು ಕಲುಷಿತಗೊಂಡು ಕುಡಿಯಲೂ ಕೂಡ ಯೋಗ್ಯವಿಲ್ಲ ಎನ್ನುವ ವರದಿಗಳು ಪ್ರಕಟವಾಗಿರುವುದು ಆತಂಕಕಾರಿ ಸಂಗತಿ. ಈ ವರದಿಯು ನದಿಯ ಜೊತೆಗೆ ಕೋಟ್ಯಂತರ ಜನರ ಬದುಕಿಗೆ ಮಾತ್ರವಲ್ಲ,
ಲಕ್ಷಾಂತರ ಜೀವರಾಶಿಗಳ ಬದುಕಿನ ಪ್ರಶ್ನೆಯನ್ನೂ ಎದುರಿಸಿದೆ. ಹೀಗಾಗಿ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಅಭಿಯಾನದಡಿ ಡಿ. 27ರಿಂದ ಕಿಷ್ಕಿಂಧೆಯಿಂದ ಮಂತ್ರಾಲಯದವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಜವಾಬ್ದಾರಿ ಮೆರೆಯಬೇಕು ಎಂದರು.
ಪಾದಯಾತ್ರೆ ಸಂಚಾಲಕ ಡಾ. ಶಿವಕುಮಾರ ಗಂಗಾವತಿ ಮಾತನಾಡಿ, ಮಿತಿಮೀರಿದ ಮಾಲಿನ್ಯದಿಂದಾಗಿ ಕುಡಿಯಲು ಕೂಡ ಯೋಗ್ಯವಿಲ್ಲದಂತಹ ದುಸ್ಥಿತಿಗೆ ನದಿಯನ್ನು ದೂಡಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ನಾವೆಲ್ಲರೂ ನಿರ್ಮಲ ತುಂಗಭದ್ರೆಗೆ, ಅದರ ಸ್ವಚ್ಛತೆಗೆ ಹೋರಾಡಬೇಕಿದೆ ಎಂದರು.
ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಮುಖಂಡರಾದ ಶಿವರೆಡ್ಡಿ ನಾಯಕ, ಚನ್ನಬಸಪ್ಪ ಸುಂಕದ, ಬೂದಿಗಿರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾ.ಪಾ., ರಾಜಶೇಖರ ಆನೆಹೊಸೂರು, ಶರಣಪ್ಪ ಕೋಟ್ಯಾಳ, ಪ್ರಹ್ಲಾದ ಜೋಷಿ, ರುದ್ರೇಶ್ ಮಂಗಳೂರು, ಶರಣಪ್ಪ ಕಾಯಿಗಡ್ಡಿ ಇತರರು ಇದ್ದರು.