ಅಳವಂಡಿ ಸಮೀಪದ ಬೋಚನಹಳ್ಳಿಯಲ್ಲಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಲಾಯಿತು.ಪ್ರಮುಖರಾದ ದೇವಪ್ಪ, ಭೀಮೇಶಪ್ಪ, ನಿಂಗನಗೌಡ, ನಿಂಗಪ್ಪ, ಹನುಮೇಶ, ಪರಶುರಾಮ, ಮಲ್ಲಪ್ಪ, ಪರಸಪ್ಪ, ಬರಮಪ್ಪ, ಭೀಮಣ್ಣ, ಮುದಕಪ್ಪ, ಪರಶುರಾಮ, ಯಲ್ಲು, ಗವಿ ಸುಗ್ಗಿ ಇತರರು ಇದ್ದರು. 
ಕೊಪ್ಪಳ

ರಂಗಭೂಮಿ ಕಲೆ ಉಳಿವಿಗೆ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕ
  • ಮನವಿ
  • ಶಿಕ್ಷಕ
ಅಳವಂಡಿ: ಪುರಾಣ- ಪುಣ್ಯಕಥೆಗಳನ್ನು ರಂಗಭೂಮಿ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಲು ನಾಟಕವು ಪ್ರಮುಖ ಸಾಧನವಾಗಿದೆ ಎಂದು ಮುಖ್ಯ ಶಿಕ್ಷಕ ದೇವಪ್ಪ ಬಚ್ಚಕ್ಕನವರ ಹೇಳಿದರು.
ಸಮೀಪದ ಬೋಚನಹಳ್ಳಿ ಗ್ರಾಮದಲ್ಲಿ ಶ್ರೀ ಭುವನೇಶ್ವರಿ ನಾಟ್ಯ ಸಂಘದಿಂದ ಅಭಿನಯಿಸಿದ ‘ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್’ ನಾಟಕ ಪ್ರದರ್ಶನ ಉದ್ಘಾಟಿಸಿ ಶನಿವಾರ ಮಾತನಾಡಿದರು.
ನಾಟಕ ಕೇವಲ ಮನರಂಜನೆಯಲ್ಲ. ಅದು ಸಮಾಜದ ಅಂಕು ಡೊಂಕು ತಿದ್ದುವ ಕಲೆಯಾಗಿದೆ. ಮೂಢನಂಬಿಕೆ, ಬಡತನ ಮುಂತಾದ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾಟಕಗಳು ಪರಿಣಾಮಕಾರಿ ಕಾರ್ಯನಿರ್ವಹಿಸುತ್ತವೆ. ನಮ್ಮ ಆಚಾರ, ವಿಚಾರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ನಾಟಕಗಳ ಪಾತ್ರ ಮುಖ್ಯವಾಗಿದೆ. ಎಲ್ಲರೂ ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ರಂಗಭೂಮಿ ಕಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು.