ಚಿಕ್ಕವಂಕಲಕುಂಟಾ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಜಾತ್ರೋತ್ಸವದ ಭಿತ್ತಿ ಪತ್ರಗಳನ್ನು ಉಪ ತಹಸೀಲ್ದಾರ್ ವಿಜಯ ಕುಮಾರ ಗುಂಡೂರು ಬಿಡುಗಡೆಗೊಳಿಸಿದರು. ಕಂದಾಯ ನಿರೀಕ್ಷಕ ಶರಣಪ್ಪ ಮುರ್ನಾಪುರ, ಪಿಡಿಒ ಹನುಮಂತಪ್ಪ ರೇಣಿ, ಕಾರ್ಯದರ್ಶಿ ಶಿವಪ್ಪ ಪುರ್ತಗೇರಿ, ವಿಎಒ ಶಿವಶರಣಪ್ಪ ಗೌಡ ಪಾಟೀಲ್, ದೇವಸ್ಥಾನದ ವ್ಯವಸ್ಥಾಪಕ ಚಂದಪ್ಪ ಕುರಿ ಇತರರಿದ್ದರು. 
ಕೊಪ್ಪಳ

ಮಾರುತೇಶ್ವರ ಜಾತ್ರೋತ್ಸವ ಯಶಸ್ಸಿಗೆ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರು ಕೋರಿಕೆ
  • ಯಲಬುರ್ಗಾ ಚಿಕ್ಕವಂಕಲಕುಂಟಾ ಮಾರುತೇಶ್ವರ ಜಾತ್ರೋತ್ಸವ
ಯಲಬುರ್ಗಾ: ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಈ ಬಾರಿಯೂ ವೈಭವದಿಂದ ಆಚರಿಸಲಾಗುತ್ತಿದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರು ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಜಾತ್ರೋತ್ಸವದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಿಂದೂ-ಮುಸ್ಲಿಂ ಸೇರಿ ವಿವಿಧ ಧರ್ಮಗಳ ಜನರು ಸೇರಿ ಭಾವೈಕ್ಯತೆಯಿಂದ ಆಚರಿಸುವ ಜಾತ್ರೆ ಇದಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ವಿವಿಧ ಸಮುದಾಯದವರು ಪಾಲ್ಗೊಳ್ಳುತ್ತಾರೆ. ಫೆ.7,8 ಮತ್ತು 9 ರಂದು ನಡೆಯುವ ಜಾತ್ರೆಯಲ್ಲಿ ಹೆಚ್ಚಿನ ಭಕ್ತರು ಸೌಹಾರ್ದದಿಂದ ಪಾಲ್ಗೊಂಡು ಪರಿಷೆ ಯಶಸ್ಸಿಗೆ ಕೈಜೋಡಿಸಬೇಕೆಂದರು.
ಕಂದಾಯ ನಿರೀಕ್ಷಕ ಶರಣಪ್ಪ ಮುರ್ನಾಪುರ, ಪಿಡಿಒ ಹನುಮಂತಪ್ಪ ರೇಣಿ, ಕಾರ್ಯದರ್ಶಿ ಶಿವಪ್ಪ ಪುರ್ತಗೇರಿ, ವಿಎಒ ಶಿವಶರಣಪ್ಪ ಗೌಡ ಪಾಟೀಲ್, ದೇವಸ್ಥಾನದ ವ್ಯವಸ್ಥಾಪಕ ಚಂದಪ್ಪ ಕುರಿ, ಗ್ರಾಪಂ ಸದಸ್ಯರಾದ ಕುಂಟೆಪ್ಪ ಚಿಣಗಿ, ಮಹಾಲಿಂಗಪ್ಪ ಗುಡದೂರ, ಕುಂಟೆಪ್ಪ ಹುನೂರು, ಮುಖಂಡರಾದ ರವೀಂದ್ರಗೌಡ ದಳಪತಿ, ಮಂಜುನಾಥ ಬೇವೂರು, ದೇವಪ್ಪ ಕುರಿ, ಹನುಮೇಶ ಚಿಣಗಿ, ಯಂಕಪ್ಪ ಗದ್ದಿ ಇತರರಿದ್ದರು.